ಅಫ್ಘಾನಿಸ್ತಾನದ ಇಬ್ಬರು, ಪಾಕ್ನ ಓರ್ವ ಕ್ರಿಕೆಟಿಗರಿಗೆ ದಂಡ
Team Udayavani, Sep 23, 2018, 6:10 AM IST
ದುಬೈ: ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ನಿಯಮ ಉಲ್ಲಂಘನೆ ನಡೆಸಿದ ಅಫ್ಘಾನಿಸ್ತಾನದ ಇಬ್ಬರು, ಪಾಕಿಸ್ತಾನದ ಓರ್ವ ಕ್ರಿಕೆಟಿಗನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ಪಂದ್ಯದ ಶೇ.15ರಷ್ಟು ಸಂಭಾವನೆಯ ದಂಡ ವಿಧಿಸಿದೆ.
ಆಫ್ಘಾನಿಸ್ತಾದ ನಾಯಕ ಅಸ್ಗರ್ ಅಫ್ಘನ್, ಸ್ಟಾರ್ ಬೌಲರ್ ರಶೀದ್ ಖಾನ್ ಹಾಗೂ ಪಾಕಿಸ್ತಾನ ತಂಡದ ಆಲ್ರೌಂಡರ್ ಹಸನ್ ಅಲಿ ಪಂದ್ಯ ಸಾಗುತ್ತಿದ್ದ ವೇಳೆ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಶಿಸ್ತು ಉಲ್ಲಂಘನೆ ನಡೆಸಿದ್ದರು. ರಶೀದ್ ಖಾನ್ ಹಾಗೂ ಹಸನ್ ಅಲಿ ಐಸಿಸಿನಿಂದ ಕ್ರಮವಾಗಿ ಎರಡು ರೇಟಿಂಗ್ ಅಂಕವನ್ನು ಕಳೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಆಟಗಾರರು ಅಶಿಸ್ತು ಪ್ರದರ್ಶಿಸಿ ಶಿಕ್ಷೆಗೆ ಗುರಿಯಾಗಿªದಾರೆ ಎನ್ನುವುದು ವಿಶೇಷ. ಅಸ್ಗರ್ ಎರಡನೇ ಸಲ ಶಿಸ್ತು ಉಲ್ಲಂಘನೆ ನಡೆಸಿ ದಂಡಕ್ಕೆ ಒಳಗಾಗಿದ್ದಾರೆ.