ಭಾರತವನ್ನು ಬೆಂಬಲಿಸಿದ ಪಾಕ್ ಫ್ಯಾನ್ ಬಶೀರ್ ಚಾಚಾ!
Team Udayavani, Sep 30, 2018, 6:45 AM IST
ದುಬಾೖ: ಪಾಕಿಸ್ಥಾನ ಏಶ್ಯ ಕಪ್ ಫೈನಲ್ ಪ್ರವೇಶಿಸಲು ವಿಫಲವಾಗಿರಬಹುದು, ಆದರೆ ಆ ತಂಡದ “ಸೂಪರ್ ಫ್ಯಾನ್’ ಬಶೀರ್ ಚಾಚಾ ಯಾನೆ “ಚಾಚಾ ಚಿಕಾಗೊ’ ಶುಕ್ರವಾರದ ಫೈನಲ್ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಆದರೆ ಸುದ್ದಿ ಇದಲ್ಲ…
ಈ ಸಂದರ್ಭದಲ್ಲಿ ಬಶೀರ್ ಚಾಚಾ ಟೀಮ್ ಇಂಡಿಯಾ ಜೆರ್ಸಿ ಧರಿಸಿ, ತ್ರಿವರ್ಣ ಧ್ವಜ ಹಾರಾಡಿಸುತ್ತ ಪಾಕಿಸ್ಥಾನದ ಬದ್ಧ ಎದುರಾಳಿಯಾಗಿರುವ ಭಾರತ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಈಗ ವೈರಲ್ ಆಗಿದೆ.
ದುಬಾೖಯಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡ ಹೊಟೇಲ್ನಲ್ಲೇ ಬಶೀರ್ ಚಾಚಾ ಕೂಡ ತಂಗಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮ, ಧೋನಿ ಮೊದಲಾದವರ ಜತೆ ನಿಂತು ಫೋಟೋ ತೆಗೆಸಿಕೊಂಡಿದ್ದರು.
ಸುಧೀರ್ ಗೌತಮ್ಗೆ ಸ್ಪಾನ್ಸರ್!
ಬಶೀರ್ ಚಾಚಾಗೆ ಸಂಬಂಧಿಸಿಸಂತೆ ಇನ್ನೊಂದು ದೊಡ್ಡ ಸುದ್ದಿ ಇದೆ. ಏಶ್ಯ ಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟಿನ ಭಾರೀ ಅಭಿಮಾನಿಯಾಗಿರುವ ಸುಧೀರ್ ಗೌತಮ್ ಅವರ ದುಬಾೖ ಪ್ರಯಾಣಕ್ಕೆ ಈ ಚಾಚಾ ಅವರೇ ಸ್ಪಾನ್ಸರ್! ಯುಎಇಗೆ ಆಗಮಿಸಲು ಆರ್ಥಿಕ ಸಂಕಟ ಎದುರಿಸುತ್ತಿದ್ದ ಸುಧೀರ್ ನೆರವಿಗೆ ನಿಲ್ಲುವ ಮೂಲಕ ಬಶೀರ್ ಎಲ್ಲರ ಹೃದಯ ಗೆದ್ದಿದ್ದಾರೆ.
ಇದೇ ಕೂಟದ ಭಾರತ-ಪಾಕಿಸ್ಥಾನ ಪಂದ್ಯಗಳ ವೇಳೆ ಪಾಕಿಸ್ಥಾನದ ಮತ್ತೋರ್ವ ಅಭಿಮಾನಿ ಆದಿಲ್ ತೇಜ್ ಜನಗಣಮನ ಹಾಡುತ್ತ, ತ್ರಿವರ್ಣ ಧ್ವಜ ಹಾರಾಡಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ