ಸೈನಾ ನೆಹ್ವಾಲ್ ಮುನ್ನಡೆ
Team Udayavani, Oct 17, 2018, 8:00 AM IST
ಒಡೆನ್ಸೆ (ಡೆನ್ಮಾರ್ಕ್): ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಕೂಟದ ಮೊದಲ ಸುತ್ತಿನಲ್ಲಿ ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ಮುನ್ನಡೆದರೆ ತಾರಾ ಆಟಗಾರ್ತಿ ಪಿವಿ ಸಿಂಧು ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.
81 ನಿಮಿಷಗಳ ಸುದೀರ್ಘ ಸೆಣ ಸಾಟದಲ್ಲಿ ಸೈನಾ ಹಾಂಕಾಂಗ್ನ ನಗನ್ ಯಿ ಚೆಯುಂಗ್ ಅವರನ್ನು 20-22, 21-17, 24-22 ಗೇಮ್ಗಳಿಂದ ಉರುಳಿಸಲು ಯಶಸ್ವಿಯಾದರು. ಆದರೆ 3ನೇ ಶ್ರೇಯಾಂಕದ ಸಿಂಧು ಇನ್ನೊಂದು ಕಠಿನ ಮುಖಾಮುಖಿಯಲ್ಲಿ ಅಮೆರಿಕದ ಬೈವೆನ್ ಝಾಂಗ್ ಕೈಯಲ್ಲಿ 17-21, 21-16, 18-21 ಗೇಮ್ಗಳಿಂದ ಶರಣಾದರು.
ಸಿಂಧು ಅವರಿಗಿದು ಝಾಂಗ್ ವಿರುದ್ಧ ಸತತ ಮೂರನೇ ಸೋಲು ಆಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಇಂಡಿಯನ್ ಓಪನ್ ಕೂಟದ ಫೈನಲ್ನಲ್ಲೂ ಅಮೆರಿಕದ ಶಟ್ಲರ್ ಸಿಂಧು ಅವರನ್ನು ಕೆಡಹಿದ್ದರು.
ಸೈನಾ ಅದ್ಭುತ ಹೋರಾಟ
ಸೈನಾ ಮತ್ತು ಚೆಯುಂಗ್ ಈ ಹಿಂದೆ 2016ರಲ್ಲಿ ಮುಖಾಮುಖಿಯಾಗಿದ್ದರು. ಆವಾಗ ಚೆಯುಂಗ್ ಗೆಲುವಿನ ನಗೆ ಚೆಲ್ಲಿದ್ದರು. ಆದರೆ ಇಲ್ಲಿ ಸೈನಾ ಅದ್ಭುತ ಹೋರಾಟ ಸಂಘಟಿಸಿ ಜಯ ಸಾಧಿಸಲು ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ