ಏಶ್ಯಾಡ್‌ ಚಾಂಪಿಯನ್‌ಗೆ ಅಘಾತವಿಕ್ಕಿದ ಭಾರತ


Team Udayavani, Oct 23, 2018, 6:00 AM IST

25.jpg

ಮಸ್ಕತ್‌: ಏಶ್ಯನ್‌ ಚಾಂಪಿಯನ್‌ ಟ್ರೋಫಿ ಹಾಕಿ ರೌಂಡ್‌ ರಾಬಿನ್‌ ಲೀಗ್‌ ಸುತ್ತಿನಲ್ಲಿ ಭಾರತ ಏಶ್ಯಾಡ್‌ ಚಾಂಪಿಯನ್‌ ಜಪಾನ್‌ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿ 9-0 ಗೋಲುಗಳ ಜಯ ದಾಖಲಿಸಿದೆ. ಇದು ಕೂಟದಲ್ಲಿ ಭಾರತಕ್ಕೊಲಿದ ಹ್ಯಾಟ್ರಿಕ್‌ ಗೆಲುವಾಗಿದೆ. ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಭಾರತ, ಎದುರಾಳಿ ಜಪಾನ್‌ಗೆ ತಲೆ ಎತ್ತಲಾಗದಂತೆ ಮಾಡಿ ಏಶ್ಯಾಡ್‌ನ‌ಲ್ಲಿ ನೀಡಿದ ಕಳಪೆ ಪ್ರದರ್ಶನವನ್ನು ಮರೆ ಮಾಚಿದೆ. ಭಾರತವೀಗ 6 ತಂಡಗಳ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಲೇಶ್ಯ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಏಶ್ಯನ್‌ ಗೇಮ್ಸ್‌ನ ಗುಂಪು ಹಂತದ ಪಂದ್ಯ ದಲ್ಲೂ ಭಾರತ ಜಪಾನ್‌ ವಿರುದ್ಧ 8-0 ಗೋಲು ಗಳಿಂದ ಗೆಲುವು ದಾಖಲಿಸಿತ್ತು. 

ಸತತ ಆಕ್ರಮಣ
ವಿಶ್ವದ 5ನೇ ಶ್ರೇಯಾಂಕಿತ ಭಾರತ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ಗೆ ಒಂದೇ ಒಂದು ಗೋಲು ಹೊಡೆಯುವ ಅವಕಾಶ ನೀಡಲಿಲ್ಲ. ಭಾರತದ ಪರಮನ್‌ದೀಪ್‌ ಸಿಂಗ್‌ 3 ಗೋಲು (4ನೇ ನಿಮಿಷ, 49ನೇ ನಿಮಿಷ, 57ನೇ ನಿಮಿ ಷ), ಹರ್ಮನ್‌ ಪ್ರೀತ್‌ ಸಿಂಗ್‌ 2 ಗೋಲು (17ನೇ ನಿಮಿಷ, 21ನೇ ನಿಮಿಷ), ಗುರ್ಜಂತ್‌ ಸಿಂಗ್‌,  ಆಕಾಶ್‌ದೀಪ್‌ ಸಿಂಗ್‌, ಸುಮೀತ್‌, ಲಲಿತ್‌ ಉಪಾಧ್ಯಾಯ ತಲಾ ಒಂದು ಗೋಲು ಹೊಡೆದು ಗೆಲುವಿನ ರೂವಾರಿಗಳಾದರು.

ಪಾಕಿಸ್ಥಾನ ವಿರುದ್ಧ ಗೆಲುವಿನ ಬಳಿಕ ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. 4ನೇ ನಿಮಿಷದಲ್ಲೇ ಮನ್‌ದೀಪ್‌ ಸಿಂಗ್‌ ಮೊದಲ ಗೋಲು ಹೊಡೆದು ಮುನ್ನಡೆ ತಂದು ಕೊಟ್ಟರು. ಅನಂತರ ಭಾರತ ಹಿಂದಿರುಗಿ ನೋಡಲೇ ಇಲ್ಲ. ಮೊದಲಾರ್ಧ ಜಪಾನ್‌ಗೆ ಸಾಕಷ್ಟು ಕಠಿನವಾಗಿ ಪರಿಣಮಿಸಿತು. ಭಾರತ ಮೊದಲ ಕ್ವಾರ್ಟರ್‌ನಲ್ಲಿ 2-0 ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಮತ್ತೆರಡು ಗೋಲು ಸಿಡಿಸಿತು.

ಮಂಕಾದ ಜಪಾನ್‌
ದ್ವಿತೀಯಾರ್ಧದಲ್ಲಿ ಜಪಾನ್‌ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದರೂ ಭಾರತೀಯರ ಆಟದ ಎದುರು ಮಂಕಾಯಿತು. ಪ್ರಾರಂಭದಲ್ಲೇ ಆಕಾಶ್‌ ದೀಪ್‌ ಸಿಂಗ್‌ 5ನೇ ಗೋಲು ಬಾರಿಸಿದರು.  ಇದಾದ ಕೆಲವೇ ಕ್ಷಣಗಳಲ್ಲಿ ಭಾರತ 10 ಆಟಗಾರರೊಂದಿಗೆ ಆಡಬೇಕಾಯಿತು. ಜಪಾನ್‌ ಆಟಗಾರನನ್ನು ತಳ್ಳಿದ ಕಾರಣ ದಿಲ್‌ಪ್ರೀತ್‌ ಸಿಂಗ್‌ ಹೊರನಡೆದರು. ಆದರೂ ಆಕ್ರಮಣಕಾರಿ ಆಟವಾಡಿದ ಸುಮೀತ್‌, ಲಲಿತ್‌  ಒಂದೊಂದು ಗೋಲು ಹೊಡೆದು  ಮುನ್ನಡೆ ತಂದಿಟ್ಟರು. 

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.