ಬಾಂಗ್ಲಾ ಗೆಲುವಿಗೆ 321 ರನ್ ಗುರಿ
Team Udayavani, Nov 6, 2018, 6:00 AM IST
ಶಿಲೆಟ್: ದ್ವಿತೀಯ ಇನ್ನಿಂಗ್ಸ್ನಲ್ಲಿ ಜಿಂಬಾಬ್ವೆಯನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದ ಬಾಂಗ್ಲಾದೇಶ, ಶಿಲೆಟ್ ಟೆಸ್ಟ್ ಪಂದ್ಯದಲ್ಲಿ 321 ರನ್ನುಗಳ ಗೆಲುವಿನ ಗುರಿ ಪಡೆದಿದೆ. ವಿಕೆಟ್ ನಷ್ಟವಿಲ್ಲದೆ 26 ರನ್ ಮಾಡಿ 3ನೇ ದಿನದಾಟ ಮುಗಿಸಿದೆ.
ಜಿಂಬಾಬ್ವೆಯ 282 ರನ್ನುಗಳಿಗೆ ಉತ್ತರವಾಗಿ ಬಾಂಗ್ಲಾ 143ಕ್ಕೆ ಆಲೌಟ್ ಆಗಿತ್ತು. ಬಳಿಕ ಜಿಂಬಾಬ್ವೆ 181ಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ಮುಗಿಸಿತು. ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ 62 ರನ್ನಿತ್ತು 5 ವಿಕೆಟ್ ಕಿತ್ತು ಜಿಂಬಾಬ್ವೆಗೆ ಕಡಿವಾಣ ಹಾಕಿದರು.
ಮೊದಲ ಸರದಿಯಲ್ಲಿ ಅವರು 6 ವಿಕೆಟ್ ಉರುಳಿಸಿದ್ದರು. ತೈಜುಲ್ ಟೆಸ್ಟ್ ಪಂದ್ಯವೊಂದರಲ್ಲಿ 10 ಪ್ಲಸ್ ವಿಕೆಟ್ ಕಿತ್ತ ಮೊದಲ ನಿದರ್ಶನ ಇದಾಗಿದೆ.
ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದು, ನಿಂತು ಆಡಿದರೆ ಬಾಂಗ್ಲಾಕ್ಕೆ ಗೆಲುವಿನ ಅವಕಾಶವಿದೆ. ಆದರೆ ಬೌಲರ್ಗಳು ಮೇಲುಗೈ ಸಾಧಿಸಿದರೆ ಜಿಂಬಾಬ್ವೆಯೂ ಗೆಲ್ಲಬಹುದು.