CONNECT WITH US  

ಕೈಫ್ ಅಹಂಕಾರವನ್ನು ಅಡಗಿಸಿದ ಶೇನ್‌ವಾರ್ನ್

ಸಿಡ್ನಿ: ಇತ್ತೀಚೆಗೆ ಬಿಡುಗಡೆಯಾದ ಆಸ್ಟ್ರೇಲಿಯ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್ ಆತ್ಮಕಥೆ ನೋ ಸ್ಪಿನ್‌ನಲ್ಲಿ ವಿಶೇಷ ಪ್ರಸಂಗವೊಂದರ ಉಲ್ಲೇಖವಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಅವರ ಅಹಂಕಾರವನ್ನು ತಾನು ಹೇಗೆ ಅಡಗಿಸಿದೆ ಎಂದು ಶೇನ್‌ ವಿವರಿಸಿದ್ದಾರೆ. 

ಅಷ್ಟು ಮಾತ್ರವಲ್ಲ ಭಾರತದಲ್ಲಿನ ಹಿರಿಯ ಕ್ರಿಕೆಟಿಗರು ತಮಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಬಯಸುವ ಅಭ್ಯಾಸವನ್ನು ಟೀಕಿಸಿದ್ದಾರೆ. ಐಪಿಎಲ್‌ ಮೊದಲ ಆವೃತ್ತಿಯಲ್ಲಿ ವಾರ್ನ್ ರಾಜಸ್ಥಾನ್‌ ರಾಯಲ್ಸ್‌ ನಾಯಕರಾಗಿದ್ದರು. ಆಗ ಆ ತಂಡ ಪ್ರಶಸ್ತಿ ಗೆದ್ದಿತ್ತು. ಆಗ ಜೈಪುರದಲ್ಲಿ ವಾಸ್ತವ್ಯ ಹೂಡಿದ್ದ ರಾಜಸ್ಥಾನ್‌ ತಂಡಕ್ಕೆ ಹೋಟೆಲೊಂದರಲ್ಲಿ ವಾಸ್ತವ್ಯ ನೀಡಲಾಗಿತ್ತು. ಆ ವೇಳೆ ರಿಸೆಪ್ಶನ್‌ಗೆ ಬಂದ ಖ್ಯಾತ ಕ್ರಿಕೆಟಿಗ ಮೊಹಮ್ಮದ್‌ ಕೈಫ್, ತನ್ನಂತಹ ಖ್ಯಾತ ಕ್ರಿಕೆಟಿಗನಿಗೆ ಚಿಕ್ಕ ಕೊಠಡಿ ನೀಡಲಾಗಿದೆ ಎಂದು ದೂರಿಕೊಂಡಿದ್ದರು. ಅದನ್ನು ಗಮನಿಸಿದ ವಾರ್ನ್, ಎಲ್ಲರಿಗೂ ಒಂದೇ ರೀತಿಯ ಕೊಠಡಿ ನೀಡಲಾಗಿದೆ. ನಾಯಕನಾಗಿರುವುದರಿಂದ ನನಗೆ ಮಾತ್ರ ದೊಡ್ಡ ಕೊಠಡಿ ನೀಡಲಾಗಿದೆ ಹೇಳಿದ್ದರಂತೆ. ಇದರಿಂದ ಸಮಾಧಾನಗೊಂಡ ಕೈಫ್ ಮರಳಿ ತೆರಳಿದ್ದರು ಎಂದು ವಾರ್ನ್ ಹೇಳಿಕೊಂಡಿದ್ದಾರೆ.

Trending videos

Back to Top