ಟಿ20 ಸರಣಿ ಗೆದ್ದ ಭಾರತ


Team Udayavani, Nov 8, 2018, 6:10 AM IST

win-ind-t-20.jpg

ಲಕ್ನೋ: ಸತತ 2ನೇ ಟಿ20 ಪಂದ್ಯದಲ್ಲಿ ಎದುರಾಳಿ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದ ರೋಹಿತ್‌ ಶರ್ಮ ನಾಯಕತ್ವದ ಭಾರತೀಯ ತಂಡ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಗೆದ್ದಿದೆ. 11ನೇ ತಾರೀಖೀನಂದು ಚೆನ್ನೈನಲ್ಲಿ ನಡೆಯುವ 3ನೇ ಪಂದ್ಯ ಔಪಚಾರಿಕವಾಗಿದೆ. ರೋಹಿತ್‌ ಅಬ್ಬರಕ್ಕೆ ನಡುಗಿದ ವಿಂಡೀಸ್‌ ಸೊಲ್ಲೆತ್ತದೆ 71 ರನ್‌ಗಳಿಂದ ಶರಣಾಗಿದೆ. ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ತನ್ನ ವೈಫ‌ಲ್ಯವನ್ನು ಮುಂದುವರಿಸಿದೆ.

ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮೆರೆದಿದ್ದ ವಿಂಡೀಸ್‌ ಕಡೆಕಡೆಗೆ ವೈಫ‌ಲ್ಯ ಅನುಭವಿಸಿತ್ತು. ಅದನ್ನು ಟಿ20ಯಲ್ಲೂ ಮುಂದುವರಿಸಿದೆ. ಟಾಸ್‌ ಸೋತು ಕ್ಷೇತ್ರರಕ್ಷಣೆ ಆಯ್ದುಕೊಂಡರೂ ಅದರ ಹಣೆಬರಹವೇನು ಬದಲಾಗಲಿಲ್ಲ. ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡ ರೋಹಿತ್‌ ಬರೀ 61 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ ನೆರವಿನಿಂದ 111 ರನ್‌ ಬಾರಿಸಿ ಹಲವು ದಾಖಲೆಗಳೊಂದಿಗೆ ಸಿಂಗಾರಗೊಂಡರು. ಧವನ್‌ ನಿಧಾನಗತಿಯಲ್ಲಿ 43 ರನ್‌ ಬಾರಿಸಿದರೆ, ರಾಹುಲ್‌ ಸ್ಫೋಟಕ 26 ರನ್‌ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 195 ರನ್‌ ಗಳಿಸಿತು.

196 ರನ್‌ ಗುರಿಯಿಟ್ಟುಕೊಂಡು ಮುನ್ನುಗ್ಗಿದ ವಿಂಡೀಸ್‌ 9 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 124 ರನ್‌ ಮಾತ್ರ. ಆ ತಂಡದ ಪರ ಡ್ಯಾರೆನ್‌ ಬ್ರಾವೊ ಗಳಿಸಿದ 23 ರನ್ನೇ ಗರಿಷ್ಠ ಸಾಧನೆ. ಭಾರತದ ಪರ ಬೌಲರ್‌ಗಳು ಸಂಘಟಿತ ಯಶಸ್ಸು ಸಾಧಿಸಿದರು. ಭುವಿ, ಖಲೀಲ್‌, ಬುಮ್ರಾ, ಕುಲದೀಪ್‌ ತಲಾ 2 ವಿಕೆಟ್‌ ಗಳಿಸಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ-ವೆಸ್ಟ್‌ಇಂಡೀಸ್‌

* ರೋಹಿತ್‌ ಶರ್ಮ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಲ್ಕು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಮೂರು ಶತಕ ಹೊಡೆದಿರುವ ಕಾಲಿನ್‌ ಮುನ್ರೊ ಎರಡನೇ ಸ್ಥಾನದಲ್ಲಿದ್ದಾರೆ. ಇತರ ಯಾವುದೇ ಆಟಗಾರ ಎರಡಕ್ಕಿಂತ ಹೆಚ್ಚಿನ ಶತಕ ಹೊಡೆದಿಲ್ಲ.
* ಟಿ20ಯಲ್ಲಿ ಇದು ರೋಹಿತ್‌ ಅವರ ಆರನೇ ಶತಕವಾಗಿದೆ. ಕೇವಲ ನಾಲ್ಕು ಆಟಗಾರರು ಗರಿಷ್ಠ ಶತಕ ಹೊಡೆದಿದ್ದಾರೆ. 21 ಶತಕ ಹೊಡೆದಿರುವ ಕ್ರಿಸ್‌ ಗೇಲ್‌ ಅಗ್ರಸ್ಥಾನದಲ್ಲಿದ್ದಾರೆ. ಬ್ರೆಂಡನ್‌ ಮೆಕಲಮ್‌, ಲ್ಯೂಕ್‌ ರೈಟ್‌ ಮತ್ತು ಮೈಕಲ್‌ ಕ್ಲಿಂಗರ್‌ ತಲಾ ಏಳು ಶತಕ ಹೊಡೆದಿದ್ದಾರೆ. ನಾಲ್ಕು ಅಂತಾರಾಷ್ಟ್ರೀಯ ಶತಕ ಸಹಿತ ಇನ್ನೆರಡು ಶತಕಗಳು ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಮತ್ತು ಐಪಿಎಲ್‌ನಲ್ಲಿ ಬಂದಿವೆ.
* ಟ್ವೆಂಟಿ20ರಲ್ಲಿ ರೋಹಿತ್‌ 50 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು 19 ಬಾರಿ ದಾಖಲಿಸಿದ್ದಾರೆ. ಈ ಸಾಧನೆಯಲ್ಲಿ ಅವರು ಕೊಹ್ಲಿ (18 ಸಲ) ಅವರನ್ನು ಹಿಂದಿಕ್ಕಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್‌ 2203 ರನ್‌ ಪೇರಿಸಿ ಕೊಹ್ಲಿ, ಮೆಕಲಮ್‌ ಮತ್ತು ಶೋಯಿಬ್‌ ಮಲಿಕ್‌ ಅವರನ್ನು ಹಿಂದಿಕ್ಕಿದ್ದಾರೆ.
* ರೋಹಿತ್‌ 2018ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 69 ಸಿಕ್ಸರ್‌ ಬಾರಿಸಿದ್ದಾರೆ. ಒಂದು ಕ್ಯಾಲೆಂಡರ್‌ ವರ್ಷದಲ್ಲಿ ಇದು ಬ್ಯಾಟ್ಸ್‌ಮನ್‌ ಓರ್ವರ ಗರಿಷ್ಠ ಸಾಧನೆಯಾಗಿದೆ. ರೋಹಿತ್‌ ಕಳೆದ ವರ್ಷ 65 ಸಿಕ್ಸರ್‌ ಬಾರಿಸಿದ್ದು ಈ ಬಾರಿ ಅದನ್ನು ಮುರಿದಿದ್ದಾರೆ. ರೋಹಿತ್‌ ಈ ವರ್ಷ ಏಕದಿನದಲ್ಲಿ 39, ಟ್ವೆಂಟಿ20ಯಲ್ಲಿ 29 ಮತ್ತು ಟೆಸ್ಟ್‌ನಲ್ಲಿ ಒಂದು ಸಿಕ್ಸರ್‌ ಬಾರಿಸಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್‌ ಮತ್ತು ಧವನ್‌ ಜತೆಯಾಗಿ 1268 ರನ್‌ ಹೊಡೆದಿದ್ದಾರೆ. ಇದು ಜೋಡಿಯಾಗಿ ಗರಿಷ್ಠ ಸಾಧನೆಯಾಗಿದೆ. ಈ ಮೂಲಕ ಡೇವಿಡ್‌ ವಾರ್ನರ್‌ ಮತ್ತು ಶೇನ್‌ ವಾಟ್ಸನ್‌ ಜತೆಯಾಗಿ 1154 ರನ್‌ ಪೇರಿಸಿದ ಸಾಧನೆಯನ್ನು ಹಿಂದಿಕ್ಕಿದರು.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.