CONNECT WITH US  

ಸಿಂಧು, ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ಗೆ

ಚೀನ ಓಪನ್‌ ಬ್ಯಾಡ್ಮಿಂಟನ್‌

ಫ್ಯೂಜು (ಚೀನ): ಭಾರತದ ಅನುಭವಿ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್‌ "ಚೀನ ಓಪನ್‌ ಬ್ಯಾಡ್ಮಿಂಟನ್‌' ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

ಪುರುಷರ ಸಿಂಗಲ್ಸ್‌ ವಿಭಾಗ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌ ಇಂಡೋನೇಶ್ಯದ ಟಾಮಿ ಸುಗಿ ಯಾರ್ಟೊ ವಿರುದ್ಧ 10-21, 21-9, 21-9 ಗೇಮ್‌ಗಳಿಂದ ಗೆದ್ದರು. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಶ್ರೀಕಾಂತ್‌ ಬಳಿಕ ಉತ್ತಮ ಪ್ರದರ್ಶನ ತೋರಿ ಹಿಡಿತ ಸಾಧಿಸಿದರು.

ಶ್ರೀಕಾಂತ್‌ 2014ರಲ್ಲಿ  ಚೀನ ಓಪನ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಸ್ನಾಯು ಸೆಳೆತದಿಂದಾಗಿ ಕಳೆದ ಸಲ ಭಾಗವಹಿಸಿರಲಿಲ್ಲ. ಶ್ರೀಕಾಂತ್‌ ಅವರ ಕ್ವಾ.ಪೈನಲ್‌ ಎದುರಾಳಿ ಚೈನೀಸ್‌ ತೈಪೆಯ ಚುಹು ಟಿನ್‌ ಚೆನ್‌ ವಿರುದ್ಧ ಆಡಲಿದ್ದಾರೆ. ಟಿನ್‌ ಚೆನ್‌ ಜಕಾರ್ತಾ ಏಶ್ಯನ್‌ ಗೇಮ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ 2 ಬಾರಿ ಟಿನ್‌ ಚೆನ್‌ ಹಾಗೂ ಶ್ರೀಕಾಂತ್‌ ಮುಖಾಮುಖೀಯಾಗಿದ್ದು, ಟಿನ್‌ ಚೆನ್‌ ಎರಡರಲ್ಲೂ ಗೆದ್ದು ಮೇಲುಗೈ ಸಾಧಿಸಿದ್ದಾರೆ. ಇದಕ್ಕೂ ಮುನ್ನ ಶ್ರೀಕಾಂತ್‌ 2014 ಹಾಂಕಾಂಗ್‌ ಓಪನ್‌ನಲ್ಲಿ ಟಿನ್‌ ಚೆನ್‌ ಅವರನ್ನು ಸೋಲಿಸಿದ್ದರು.

ಸಿಂಧು ಸುಲಭ ಗೆಲುವು
ವನಿತಾ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಸಿಂಧು ಥಾಯ್ಲೆಂಡ್‌ನ‌ ಬುಸನಾನ್‌ ಆನ್‌ಗ್ಬಮ್ರುಂಗಫಾನ್‌ ಅವರನ್ನು 21-12, 21-15 ನೇರ ಗೇಮ್‌ಗಳಿಂದ ಸೋಲಿಸಿದರು. ಥಾಯ್ಲೆಂಡ್‌ ಆಟಗಾರ್ತಿ ಹೆಚ್ಚಿನ ಫೈಪೋ ಟಿ ನೀಡದ ಕಾರಣ ಸಿಂಧುಗೆ ಸುಲ» ಜಯ ಒಲಿಯಿತು. 

2016ರಲ್ಲಿ ಚೀನ ಪ್ರಶಸ್ತಿ ಗೆದ್ದಿರುವ ಸಿಂಧು ಮುಂದಿನ ಪಂದ್ಯದಲ್ಲಿ ಆತಿಥೇಯ ನಾಡಿನ ಹೀ ಬಿಂಗ್‌ಜಾವೊ ಅವರನ್ನು ಎದುರಿಸಲಿದ್ದಾರೆ. ವಿಶ್ವದ 7ನೇ  ಶ್ರೇಯಾಂಕಿತೆ ಬಿಂಗ್‌ಜಾವೊ ಅವರನ್ನು ಎರಡು ಸಲ ಎದುರಿಸಿರುವ ಸಿಂಧು ಎರಡರಲ್ಲೂ ಸೋಲನುಭವಿಸಿದ್ದಾರೆ.

ಡಬಲ್ಸ್‌ನಲ್ಲೂ ಜಯ
ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಇಂಡೋನೇಶ್ಯದ ವಹ್ಯು ನಾಯಕ ಅರ್ಯ ಪಂಗಾರ್ಯನಿರ-ಅದೆ ಯೂ ಸುಫ್ ಸ್ಯಾಂಟೊಸೊ ವಿರುದ್ಧ 16-21, 21-14, 21-15 ಅಂತರದಿಂದ ಗೆದ್ದು ಕ್ವಾ ಫೈನಲ್‌ ಪ್ರವೇಶಿಸಿದರು.

Trending videos

Back to Top