CONNECT WITH US  

ಹರ್ಯಾಣವನ್ನು ಹೆದರಿಸಿದ ದಬಾಂಗ್‌ ಡೆಲ್ಲಿ

ಗ್ರೇಟರ್‌ ನೋಯ್ಡಾ: ದೀಪಾವಳಿ ವಿರಾಮದ ಬಳಿಕ ಗುರುವಾರ ನಡೆದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 39-33 ಅಂಕಗಳಿಂದ ಹರ್ಯಾಣವನ್ನು ಸೋಲಿಸಿದೆ.  ದಿನದ ದ್ವಿತೀಯ ಪಂದ್ಯದಲ್ಲಿ ಬಗೆಂಗಳೂರು ಬುಲ್ಸ್‌ 37-27 ಅಂತರದಿಂದ ಯು.ಪಿ. ಯೋಧ ತಂಡವನ್ನು ಹಿಮ್ಮೆಟ್ಟಿಸಿದೆ.

ಡೆಲ್ಲಿ ಸಂಘಟಿತ ಆಟ
ಹರ್ಯಾಣ ತಂಡ ಸಂಘಟಿತ ಆಟವಾಡದಿದ್ದದ್ದು ಸೋಲಿಗೆ ಕಾರಣವಾಯಿತು. ಮೋನು ಗೋಯತ್‌ರಂತಹ ಒಬ್ಬನೇ ಆಟಗಾರನನ್ನು ನೆಚ್ಚಿಕೊಂಡಿದ್ದು ಇನ್ನೊಂದು ತಪ್ಪು. ಇದಕ್ಕೆ ಬದಲಿಯಾಗಿ ಡೆಲ್ಲಿ ತಂಡ ಸಂಘಟಿತವಾಗಿ ಸೆಣಸಿತು. ಗೆಲುವಿಗೆ ಪ್ರತಿಯೊಬ್ಬರೂ ಕಾಣಿಕೆ ನೀಡಿದರು.

ಡೆಲ್ಲಿ ಪರ 15 ಬಾರಿ ದಾಳಿ ನಡೆಸಿದ ನವೀನ್‌ ಕುಮಾರ್‌ 9 ಅಂಕ ಗಳಿಸಿದರು. ಇವರಿಗೆ ಮಿರಾಜ್‌ ಶೇಖ್‌, ಚಂದ್ರನ್‌ ರಂಜಿತ್‌ ಸಾಥ್‌ ನೀಡಿದರು. ರವೀಂದರ್‌ ಪಹಲ್‌ ರಕ್ಷಣೆಯಲ್ಲಿ ತಂಡದ ಕೈಹಿಡಿದರು. ಅವರು 6 ಬಾರಿ ಎದುರಾಳಿ ಆಟಗಾರನನ್ನು ತಮ್ಮ ಕೋಟೆಯಲ್ಲಿ ಕೆಡವಿಕೊಳ್ಳಲು ಯತ್ನಿಸಿದರು. 5 ಬಾರಿ ಯಶಸ್ವಿಯಾಗಿ 6 ಅಂಕ ಗಳಿಸಿದರು.
ಮತ್ತೂಂದು ಕಡೆ ಹರ್ಯಾಣ ತಂಡದ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೋನು ಗೋಯತ್‌ ಪರವಾಗಿಲ್ಲ ಎನ್ನುವ ಆಟವಾಡಿದರು. ತಂಡದ ಅತೀ ಮುಖ್ಯ ಆಟಗಾರನಾಗಿರುವ ಅವರು 18 ಬಾರಿ ದಾಳಿ ನಡೆಸಿ 11 ಅಂಕ ತರಲು ಮಾತ್ರ ಯಶಸ್ವಿಯಾದರು. ಉಳಿದ ಆಟಗಾರರು ಇನ್ನಷ್ಟು ಕಳಪೆಯಾಟವಾಡಿದರು. ಪರಿಣಾಮ ಸೋಲು.

Trending videos

Back to Top