CONNECT WITH US  

ಸೌರಭ್‌ಗೆ ಸ್ವರ್ಣ, ಅರ್ಜುನ್‌ಗೆ ಬೆಳ್ಳಿ

ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌

ಕುವೈಟ್‌: ಭಾರತದ ಯುವ ಶೂಟಿಂಗ್‌ ತಾರೆ ಸೌರಭ್‌ ಚೌಧರಿ "ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌' ಕೂಟದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಇದು ಕಳೆದ 4 ತಿಂಗಳಲ್ಲಿ ಸೌರಭ್‌ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿದ 4ನೇ ಚಿನ್ನದ ಪದಕವಾಗಿದೆ.

ಪುರುಷರ 10ಮೀ. ಏರ್‌ ಪಿಸ್ತೂಲ್‌ ಜೂನಿಯರ್‌ ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ 239.8 ಅಂಕ ಗಳಿಸಿದ ಸೌರಭ್‌ ಚಿನ್ನಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ತಂಡ ವಿಭಾಗದಲ್ಲಿ ಸೌರಭ್‌ ಚೌಧರಿ, ಅರ್ಜುನ್‌ ಸಿಂಗ್‌ ಚಿಮ್ಮ ಹಾಗೂ ಅನ್ಮೋಲ್‌ ಜೈನ್‌ ಕೂಡ ಚಿನ್ನದ ಪದಕ ಜಯಿಸಿದ್ದರು. 

ಸೌರಭ್‌ ಆಗಸ್ಟ್‌ನಲ್ಲಿ ನಡೆದ ಜಕಾರ್ತಾ ಏಶ್ಯನ್‌ ಗೇಮ್ಸ್‌, ಸಪ್ಟೆಂ ಬರ್‌ನಲ್ಲಿ ನಡೆದ "ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌' ಹಾಗೂ ಅಕ್ಟೋಬರ್‌ನಲ್ಲಿ ಆರ್ಜೆಂಟೀನಾದಲ್ಲಿ ನಡೆದ ಯೂತ್‌ ಒಲಿಂಪಿಕ್‌ ಗೇಮ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅರ್ಹತಾ ಸುತ್ತಿನಲ್ಲಿ ಭಾರತೀಯ ಶೂಟರ್‌ಗಳು ತಮ್ಮ ಪ್ರಾಬಲ್ಯ ಮೇರೆದಿದ್ದರು. ಅರ್ಜುನ್‌ ಅಗ್ರಸ್ಥಾನ, ಅನ್ಮೋಲ್‌ ದ್ವಿತೀಯ ಸ್ಥಾನ, ಸೌರಭ್‌ ತೃತೀಯ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದರು. 

ಒಟ್ಟು 10 ಪದಕ 
ಈ ಮೂಲಕ ಭಾರತ ಈ ಕೂಟದಲ್ಲಿ ಸದ್ಯ 3 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಸಂಪಾದಿಸಿದೆ.

 ಸಾಧ್ಯವಾಗಲಿಲ್ಲ  ಕ್ಲೀನ್‌ಸ್ವೀಪ್
ಇದೇ ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಶೂಟರ್‌ ಅರ್ಜುನ್‌ ಸಿಂಗ್‌ ಚಿಮ್ಮ 237.7 ಅಂಕಗಳಿಸಿ ಬೆಳ್ಳಿ  ಪದಕ ಗೆದ್ದರು. ಚೈನೀಸ್‌ ತೈಪೆಯ  ಹಾಂಗ್‌ ವೀ ಟೀ (218.0) ಕಂಚಿನ ಪದಕ ಗೆದ್ದು ಭಾರತದ ಕ್ಲೀನ್‌ಸಿÌàಪ್‌ ಪರಾಕ್ರಮಕ್ಕೆ ಅಡ್ಡಿ ಯಾದರು. ಹೀಗಾಗಿ ಅನ್ಮೋಲ್‌ 195.1 ಅಂಕಗಳಿಸಿ 4ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 

Trending videos

Back to Top