ಪ್ರೊ ಕಬಡ್ಡಿ: ಗುಜರಾತ್ಗೆ ಅರ್ಹ ಗೆಲುವು
Team Udayavani, Nov 17, 2018, 6:30 AM IST
ಅಹ್ಮದಾಬಾದ್: ಪ್ರೊ ಕಬಡ್ಡಿ 6ನೇ ಆವೃತ್ತಿ ಅಹ್ಮದಾಬಾದ್ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್ ಜೈಂಟ್ಸ್ ಜಯದ ಆರಂಭ ಪಡೆದಿದೆ. ಗುಜರಾತ್ ತನ್ನ ತವರಿನ ಚರಣದ ಮೊದಲ ಪಂದ್ಯದಲ್ಲಿ 35-23 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ ಅನ್ನು ಮಣಿಸಿತು.
ಶುಕ್ರವಾರ ಟ್ರಾನ್ಸ್ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ಜೈಂಟ್ಸ್ ಅತ್ಯುತ್ತಮ ಆಟ ಪ್ರದರ್ಶಿಸಿತು. ತಂಡದ ತಾರಾ ಆಟಗಾರರಾದ ಕೆ.ಪ್ರಪಂಚನ್ (9 ಅಂಕ) ರೈಡಿಂಗ್ನಿಂದ ಅದ್ಭುತ ಆಟ ಪ್ರದರ್ಶಿಸಿದರು. ಇವರಿಗೆ ಅಜಯ್ ಕುಮಾರ್ (6 ಅಂಕ) ಸಾಥ್ ನೀಡಿದರು. ಉಳಿದಂತೆ ಪರ್ವೇಶ್ (4 ಅಂಕ) ಉತ್ತಮ ಟ್ಯಾಕಲ್ ನಡೆಸುವ ಮೂಲಕ ತಂಡಕ್ಕೆ ಸಂಕಷ್ಟದಲ್ಲಿ ನೆರವಾದರು.
ಬೆಂಗಾಲ್ ತಂಡದ ತಾರಾ ಆಟಗಾರರು ಭಾರೀ ವೈಫಲ್ಯ ಅನುಭವಿಸಿದರು. ಮಣೀಂದರ್ ಸಿಂಗ್ (6 ಅಂಕ) ಹಾಗೂ ಜಾಂಗ್ ಕುನ್ ಲೀ (5 ಅಂಕ) ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಲು ವಿಫಲವಾದರು. ಹೀಗಾಗಿ ಬೆಂಗಾಲ್ ಗೆಲುವಿನ ಹತ್ತಿರ ಸುಳಿಯಲೂ ಸಾಧ್ಯವಾಗದೆ ಸೋಲು ಅನುಭವಿಸುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ