ಇಂಗ್ಲೆಂಡ್ ತಂಡಕ್ಕೆ ಜೊಕೋ ಕಾರು ಚಾಲಕ: ಮನವಿ
Team Udayavani, Nov 19, 2018, 11:03 AM IST
ಲಂಡನ್: ವಿಶ್ವದ ಖ್ಯಾತ ಟೆನಿಸಿಗ ಸರ್ಬಿಯಾದ ನೋವಾಕ್ ಜೊಕೋವಿಕ್ ತಮ್ಮ ಕಾರು ಚಾಲಕನನ್ನು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳುವಂತೆ ಹಾಲಿ ಇಂಗ್ಲೆಂಡ್ ತಂಡದ ಕೋಚ್ ಟ್ರೆವರ್ ಬೇಲಿಸ್ಗೆ ಟ್ವಿಟರ್ನಲ್ಲಿ ಸಲಹೆ ನೀಡಿದ್ದಾರೆ.
“ಕಳೆದ 10 ವರ್ಷದಿಂದ ಇಮ್ರಾನ್ ಬಶೀರ್ ನನ್ನ ಕಾರು ಚಾಲಕನ ಕೆಲಸ ನಿರ್ವಹಿಸುತ್ತಿದ್ದಾನೆ. ಆತನೊಬ್ಬ ಅದ್ಭುತ ಕ್ರಿಕೆಟಿಗ. ಸ್ಥಳೀಯ ಕ್ರಿಕೆಟ್ ಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾನೆ. ಆತನ ಸಾಧನೆಯನ್ನು ಪರಿಗಣಿಸಬೇಕಿದೆ. ಮುಂದಿನ ಇಂಗ್ಲೆಂಡ್ ತಂಡದ ಆಯ್ಕೆ ವೇಳೆ ಬೇಲಿಸ್ ಅವರೇ, ನಿಮ್ಮ ತಂಡಕ್ಕೆ ಆತನನ್ನು ಸೇರಿಸಿಕೊಳ್ಳಿ’ ಎಂದು ಜೊಕೋ ಟ್ವೀಟ್ ಮಾಡಿದ್ದಾರೆ.
ತತ್ಕ್ಷಣ ಈ ಟ್ವೀಟ್ ಗಮನಿಸಿದ ಐಸಿಸಿ, “ನೀವು ಒಂದು ವೇಳೆ ಮುಂದಿನ ವಿಂಬಲ್ಡನ್ಗೆ ಅಭ್ಯಾಸ ನಡೆಸುವುದಾದರೆ ನಮ್ಮ ಕ್ರಿಕೆಟ್ ವಿಶ್ವಕಪ್ ನೆಟ್ ಅಭ್ಯಾಸಕ್ಕೆ ಬನ್ನಿ’ ಎಂದು ತಿಳಿಹಾಸ್ಯದ ಮೂಲಕ ಪ್ರತಿಕ್ರಿಯೆ ನೀಡಿದೆ.