ಅತ್ಯಾಚಾರ ಆರೋಪ: ಜೊಹ್ರಿ ಮುಕ್ತ
Team Udayavani, Nov 22, 2018, 6:00 AM IST
ಹೊಸದಿಲ್ಲಿ: ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅತ್ಯಾಚಾರ ಆರೋಪದಿಂದ ಮುಕ್ತರಾಗಿದ್ದಾರೆ. ಅನಾಮಿಕ ಮಹಿಳೆ ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್ ಅವರ ಮೇಲೆ ಕಳೆದ ತಿಂಗಳು ಅತ್ಯಾಚಾರ ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐಯ ತ್ರಿಸದಸ್ಯ ಸಮಿತಿ ತನಿಖೆ ಆರಂಭಿಸಿತ್ತು. ರಾಹುಲ್ ಜೊಹ್ರಿ ಅವರ ಮೇಲೆ ದಾಖಲಾಗಿರುವ ದೂರು ಹಾನಿಕಾರಕ ಹಾಗೂ ಕಪೋಲಕಲ್ಪಿತ ಎಂದು ತೀರ್ಮಾನಿಸಲಾಗಿದೆ.
“ದೂರುದಾರರು ದೂರಿಗೆ ಸರಿಯಾದ ದಾಖಲೆಗಳನ್ನು ನೀಡಿಲ್ಲ. ಅಧಿಕಾರಿಯೊಬ್ಬರ ವಿರುದ್ಧ ಮಾಡಿರುವ ಈ ಅತ್ಯಾಚಾರ ಆರೋಪ ಸುಳ್ಳು ಹಾಗೂ ಆಧಾರರಹಿತ. ಅಲ್ಲದೆ ರಾಹುಲ್ ಅವರ ಗೌರವಕ್ಕೆ ಧಕ್ಕೆ ತರಲು ಹಾಗೂ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ರೂಪಿಸಿದ ತಂತ್ರವಾಗಿದೆ. ಹೀಗಾಗಿ ರಾಹುಲ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ’ ಎಂದು ತನಿಖಾ ಸಮಿತಿ ಮುಖ್ಯಸ್ಥ, ನ್ಯಾಯಮೂರ್ತಿ ರಾಕೇಶ್ ಶರ್ಮ ತಿಳಿಸಿದ್ದಾರೆ.
“ಸುಳ್ಳು ಆರೋಪದಿಂದ ನಾನು ಮುಕ್ತನಾಗಿದ್ದೇನೆ. ದೇವರಲ್ಲಿ ನಂಬಿಕೆ ಇಟ್ಟ ಕಾರಣ ಈ ಆರೋಪದಿಂದ ಹೊರಬರಲು ಸಾಧ್ಯವಾಯಿತು’ ಎಂದು ರಾಹುಲ್ ಜೊಹ್ರಿ ಹೇಳಿದ್ದಾರೆ. ರಾಹುಲ್ ಜೊಹ್ರಿ ಅವರ ಮೇಲೆ ಅತ್ಯಾಚಾರ ಆರೋಪ ಬಿಸಿಸಿಐ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಆರೋಪದಿಂದಾಗಿ ರಾಹುಲ್ ಅವರಿಗೆ 3 ವಾರಗಳ ಕಾಲ ಬಿಸಿಸಿಐ ಕಚೇರಿಗೆ ಬಾರದಂತೆ ತಡೆಹಿಡಿಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ