ವಿಶ್ವಕಪ್ ಹಾಕಿ: ಮೊದಲ ಪಂದ್ಯ ಗೆದ್ದ ಬೆಲ್ಜಿಯಂ
Team Udayavani, Nov 29, 2018, 6:10 AM IST
ಭುವನೇಶ್ವರ: ವಿಶ್ವಕಪ್ ಹಾಕಿ ಕೂಟದ ಉದ್ಘಾಟನಾ ಪಂದ್ಯದಲ್ಲಿ ಬೆಲ್ಜಿಯಂ 2-1 ಗೋಲುಗಳಿಂದ ಕೆನಡಾವನ್ನು ಮಣಿಸಿತು.
ಪಂದ್ಯದ 3ನೇ ನಿಮಿಷದಲ್ಲೇ ಬೆಲ್ಜಿಯಂನ ಫೆಲಿಕ್ಸ್ ಡಿನೇಯರ್ ಈ ಕೂಟದ ಮೊದಲ ಗೋಲು ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು. 22ನೇ ನಿಮಿಷದಲ್ಲಿ ನಾಯಕ ಥಾಮಸ್ ಬ್ರಿàಲ್ಸ್ ದ್ವಿತೀಯ ಗೋಲು ಸಿಡಿಸಿ ಬೆಲ್ಜಿಯಂ ಮುನ್ನಡೆಯನ್ನು ವಿಸ್ತರಿಸಿದರು.
3ನೇ ಕ್ವಾರ್ಟರ್ ತನಕ ಬೆಲ್ಜಿಯಂ ಇದೇ ಮುನ್ನಡೆ ಕಾಯ್ದುಕೊಂಡಿತ್ತು. ಕೆನಡಾದ ಏಕೈಕ ಗೋಲನ್ನು 48ನೇ ನಿಮಿಷದಲ್ಲಿ ಮಾರ್ಕ್ ಪಿಯರ್ಸನ್ ಹೊಡೆದರು.