ವಿಲಿಯಮ್ಸನ್ ಸೆಂಚುರಿ ನ್ಯೂಜಿಲ್ಯಾಂಡ್ ಚೇತರಿಕೆ
Team Udayavani, Dec 7, 2018, 6:45 AM IST
ಅಬುಧಾಬಿ: ನಾಯಕ ಕೇನ್ ವಿಲಿಯಮ್ಸನ್ ಅವರ ಅಜೇಯ 139 ರನ್ ಪರಾಕ್ರಮದಿಂದ ಪಾಕಿಸ್ಥಾನ ವಿರುದ್ಧದ ಅಬುಧಾಬಿ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಚೇತರಿಕೆ ಕಂಡಿದೆ. 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 272 ರನ್ ಪೇರಿಸಿದೆ.
ಸದ್ಯ ನ್ಯೂಜಿಲ್ಯಾಂಡ್ 198 ರನ್ನುಗಳ ಮುನ್ನಡೆಯಲ್ಲಿದ್ದು, ಶುಕ್ರವಾರ ಅಂತಿಮ ದಿನವಾದ್ದರಿಂದ ಪಂದ್ಯ ಸ್ಪಷ್ಟ ಫಲಿತಾಂಶ ದಾಖಲಿಸುವ ಯಾವುದೇ ಸಾಧ್ಯತೆ ಇಲ್ಲ. ವಿಲಿಯಮ್ಸನ್ ಜತೆಗೆ 90 ರನ್ ಮಾಡಿರುವ ಹೆನ್ರಿ ನಿಕೋಲ್ಸ್ ಕ್ರೀಸಿನಲ್ಲಿದ್ದಾರೆ. ಇವರಿಬ್ಬರು ಈಗಾಗಲೇ 212 ರನ್ ಜತೆಯಾಟ ನಿಭಾಯಿಸಿದ್ದಾರೆ.