ಎಲ್ಲ 10 ವಿಕೆಟ್ ಕಿತ್ತ ಮಣಿಪುರ ಬೌಲರ್
Team Udayavani, Dec 13, 2018, 6:00 AM IST
ಅನಂತಪುರ (ಆಂಧ್ರ ಪ್ರದೇಶ): ಅಂಡರ್-19 ಕೂಚ್ ಬೆಹಾರ್ ಕ್ರಿಕೆಟ್ ಕೂಟದಲ್ಲಿ ಮಣಿಪುರದ ಎಡಗೈ ಮಧ್ಯಮ ವೇಗಿ ರೆಕ್ಸ್ ರಾಜ್ಕುಮಾರ್ ಸಿಂಗ್ ಅರುಣಾ ಚಲಪ್ರದೇಶದ ಎಲ್ಲ 10 ವಿಕೆಟ್ಗಳನ್ನು ಉರುಳಿಸಿದ ಸಾಧನೆಗೈದಿದ್ದಾರೆ.
ಮಣಿಪುರಕ್ಕೆ ರಣಜಿ ಮಾನ್ಯತೆ ಲಭಿಸಿದ್ದರಿಂದ 18 ವರ್ಷದ ರಾಜ್ ಕುಮಾರ್ಗೂ ದೇಶಿ ಕ್ರಿಕೆಟಿನ ಬಾಗಿಲು ತೆರೆದಿತ್ತು. ಸದ್ಯ ಕೂಚ್ ಬೆಹಾರ್ನಲ್ಲಿ ಆಡುತ್ತಿರುವ ಅವರು ತಮ್ಮ ಘಾತಕ ಬೌಲಿಂಗ್ನಿಂದ ಮಣಿಪುರಕ್ಕೆ 10 ವಿಕೆಟ್ಗಳ ಜಯ ತಂದಿತ್ತರು.
ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ 138ಕ್ಕೆ ಆಲೌಟಾಯಿತು. ಮಣಿಪುರ 122 ರನ್ನಿಗೆ ಉರುಳಿತು. 2ನೇ ಇನ್ನಿಂಗ್ಸ್ನಲ್ಲಿ ಅರುಣಾಚಲಪ್ರದೇಶ, ರಾಜ್ಕುಮಾರ್ ದಾಳಿಗೆ ಸಿಲುಕಿ 18.5 ಓವರ್ಗಳಲ್ಲಿ ಕೇವಲ 36 ರನ್ನಿಗೆ ಆಲೌಟಾಯಿತು. ರಾಜ್ಕುಮಾರ್ ಸಾಧನೆ 11 ರನ್ನಿಗೆ 10 ವಿಕೆಟ್! ಈ ಹಂತದಲ್ಲಿ ಅವರು 3 ಬಾರಿ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಗೆಲುವಿಗೆ 53 ರನ್ ಗುರಿ ಪಡೆದ ಮಣಿಪುರ 7.5 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿತು. ಮೊದಲ ಇನ್ನಿಂಗ್ಸ್ನಲ್ಲಿ ರಾಜ್ಕುಮಾರ್ 33 ರನ್ನಿಗೆ 5 ವಿಕೆಟ್ ಉರುಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ