ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಗಂಭೀರ್ ಕೋಚಿಂಗ್?
Team Udayavani, Dec 15, 2018, 12:11 PM IST
ಮೊಹಾಲಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದ ಗೌತಮ್ ಗಂಭೀರ್ ಹೊಸ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ದಿಲ್ಲಿ ಕ್ರಿಕೆಟಿಗ ಮುಂಬರುವ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚಿಂಗ್ ಸಿಬಂದಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತಂತೆ ಪಂಜಾಬ್ ಫ್ರಾಂಚೈಸಿ ಗಂಭೀರ್ಗೆ ಆಹ್ವಾನ ನೀಡಿದೆ ಎನ್ನಲಾಗಿದೆ. ಇತ್ತೀಚೆಗೆ ಗಂಭೀರ್ ಜತೆ ಪಂಜಾಬ್ ಸಾಮಾಜಿಕ ಜಾಲತಾಣದಲ್ಲಿ ಸಂಭಾಷಣೆ ನಡೆಸಿತ್ತು. ಈ ವೇಳೆ ಪಂಜಾಬ್ ತಂಡವನ್ನು ದೇಶಿ ಕ್ರಿಕೆಟ್ ಕೂಟದಲ್ಲಿ ಸೇರಿಕೊಳ್ಳುವ ಸೂಚನೆಯೊಂದನ್ನು ಗಂಭೀರ್ ನೀಡಿದ್ದರು. ಹೀಗಾಗಿ ಅವರು ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.