ಕತಾರ್ ವಿಶ್ವಕಪ್ ಫೈನಲ್:ರೇಸ್ನಲ್ಲಿ 8 ಕ್ರೀಡಾಂಗಣ
Team Udayavani, Dec 17, 2018, 6:30 AM IST
ದೋಹಾ: ಕತಾರ್ನಲ್ಲಿ ನಡೆಯಲಿರುವ 2022ರ ವಿಶ್ವಕಪ್ ಫುಟ್ಬಾಲ್ ಕೂಟದ ಫೈನಲ್ ಪಂದ್ಯದ ಆತಿಥ್ಯಕ್ಕಾಗಿ ಸ್ಪರ್ಧೆ ಆರಂಭವಾಗಿದೆ. ಇದರಲ್ಲಿ ಲುಸೈಲ್ ಕ್ರೀಡಾಂಗಣವೂ ಸೇರಿದಂತೆ 8 ಕ್ರೀಡಾಂಗಣಗಳು ಫೈನಲ್ ರೇಸ್ನಲ್ಲಿ ಇವೆ ಎಂದು ಕತಾರ್ ಫುಟ್ಬಾಲ್ ಸಂಸ್ಥೆ ಘೋಷಿಸಿದೆ.
ಫೈನಲ್ಗಾಗಿ 80 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಕ್ರೀಡಾಂಗಣದ ಅಗತ್ಯವಿದ್ದು, ಯಾವ ಕ್ರೀಡಾಂಗಣಕ್ಕೆ ಫೈನಲ್ ನಡೆಸುವ ಭಾಗ್ಯ ಸಿಗಲಿದೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.