ಪ್ರೊ ಕಬಡ್ಡಿ: ಹಾಲಿ ಚಾಂಪಿಯನ್ ಪಾಟ್ನಾಗೆ ಆಘಾತ
Team Udayavani, Dec 17, 2018, 6:00 AM IST
ಪಂಚಕುಲ (ಹರ್ಯಾಣ): ಕನ್ನಡಿಗ ಪ್ರಶಾಂತ್ ಕುಮಾರ್ ರೈ (11 ಅಂಕ) ಪ್ರಚಂಡ ರೈಡಿಂಗ್ ನೆರವಿನಿಂದ ಪ್ರೊ ಕಬಡ್ಡಿ 6ನೇ ಆವೃತ್ತಿ ಪಂಚಕುಲದ ಚರಣದ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾ 47-31 ಅಂಕಗಳ ಅಂತರದಿಂದ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿದೆ.
ಜಯದೊಂದಿಗೆ ನಾಕೌಟ್ ಹಂತಕ್ಕೆ ಹತ್ತಿರವಾಗುವ ಕನಸು ಕಂಡಿದ್ದ ಪಾಟ್ನಾ ಪೈರೇಟ್ಸ್ಗೆ ಹಿನ್ನಡೆಯಾಗಿದೆ. ಪಾಟ್ನಾ ಪರ ರೈಡಿಂಗ್ನಿಂದ ಮಂಜಿತ್ (10 ಅಂಕ) ಹಾಗೂ ವಿಕಾಸ್ ಜಗ್ಲಾನ್ (5 ಅಂಕ) ಟ್ಯಾಕಲ್ ನಡೆಸಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಉಳಿದ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಹಾಲಿ ಚಾಂಪಿಯನ್ಸ್ ಮುಖಭಂಗ ಅನುಭವಿಸಿದರು.
ಯುಪಿ ಅಬ್ಬರ: ಪ್ರಶಾಂತ್ ಕುಮಾರ್ ರೈ ಸೊಗಸಾದ ರೈಡಿಂಗ್ ಪ್ರದರ್ಶಿಸಿದರು. ಅನುಭವಿ ಆಟಗಾರ ರೈ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಿದರು. ತಂಡದ ವೈಯಕ್ತಿಕ ಶ್ರೇಷ್ಠ ರೈಡರ್ ಎನಿಸಿಕೊಂಡರು. ತಂಡದ ಸಹ ಆಟಗಾರ ಶ್ರೀಕಾಂತ್ ಜಾಧವ್ (8 ಅಂಕ) ರೈಡಿಂಗ್ನಲ್ಲಿ ಕಮಾಲ್ ಮಾಡಿದರು. ಸಚಿನ್ ಕುಮಾರ್ (5 ಅಂಕ) ಹಾಗೂ ಜೀವ ಕುಮಾರ್ (4 ಅಂಕ) ಟ್ಯಾಕಲ್ನಿಂದ ಅಬ್ಬರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ