ಅಲಸ್ಟೇರ್ ಕುಕ್ಗೆ ನೈಟ್ಹುಡ್ ಗೌರವ
Team Udayavani, Dec 30, 2018, 12:30 AM IST
ಇಂಗ್ಲೆಂಡ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಪ್ರತಿಷ್ಠಿತ ನೈಟ್ಹುಡ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ನೂತನ ವರ್ಷದ ಆರಂಭದ ದಿನದಂದು ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಅಲಸ್ಟೇರ್ ಕುಕ್ ಜತೆಗೆ ಈ ಗೌರವ ಸಂಪಾದಿಸುತ್ತಿರುವ ಮತ್ತೋರ್ವ ಕ್ರೀಡಾಪಟು ಇಂಗ್ಲೆಂಡ್ ರಗಿºà ತಂಡದ ಮಾಜಿ ನಾಯಕ ಬಿಲ್ ಬೇಮಂಟ್. 2007ರ ಬಳಿಕ ಈ ಪ್ರಶಸ್ತಿ ಕ್ರಿಕೆಟಿಗನೊಬ್ಬನಿಗೆ ಒಲಿದು ಬಂದಿರುವುದು ವಿಶೇಷ. ಅಂದು ಇಂಗ್ಲೆಂಡಿನ ಖ್ಯಾತ ಆಲ್ರೌಂಡರ್ ಇಯಾನ್ ಬೋಥಂ ನೈಟ್ಹುಡ್ ಗೌರವ ಸ್ವೀಕರಿಸಿದ್ದರು.
ಇಂಗ್ಲೆಂಡ್ ಟೆಸ್ಟ್ ಇತಿಹಾಸದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಆಗಿರುವ ಕುಕ್, 161 ಪಂದ್ಯಗಳನ್ನಾಡಿ 33 ಶತಕ ಹಾಗೂ 12,472 ರನ್ ಬಾರಿಸಿದ್ದಾರೆ. ಇವೆರಡೂ ಇಂಗ್ಲೆಂಡ್ ಕ್ರಿಕೆಟ್ ದಾಖಲೆಗಳಾಗಿವೆ.
“ಇದು ಇಂಗ್ಲೆಂಡಿನ ಅಸಾಮಾನ್ಯ ಕ್ರಿಕೆಟ್ ಸಾಧಕನಿಗೆ ಅರ್ಹವಾಗಿಯೇ ಒಲಿಯಬೇಕಾದ ಗೌರವ’ ಎಂಬುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ