CONNECT WITH US  

ಮತ್ತೆ ವೈರಲ್ ಅಗ್ತಿದೆ ದ್ರಾವಿಡ್ ಹಳೆಯ ವೀಡಿಯೋ

ದ್ರಾವಿಡ್ ನೋಡಿ ಕಲಿಯಬೇಕಿದೆ ಪಾಂಡ್ಯಾ, ರಾಹುಲ್ 

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಖಾಸಗಿ ವಾಹಿನಿಯ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ಸಮಯದಲ್ಲಿ ಕ್ರಿಕೆಟ್ ನ ‘ಜಂಟಲ್ ಮ್ಯಾನ್’ ರಾಹುಲ್ ದ್ರಾವಿಡ್ ಅವರ ಹಳೆಯ ವೀಡಿಯೋ ಒಂದು ಮತ್ತೆ ಸದ್ದು ಮಾಡುತ್ತಿದೆ. 

ಖಾಸಗಿ ಟಾಕ್ ಶೋನಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಕನ್ನಡಿಗ ರಾಹುಲ್ ಹುಡುಗಿಯರ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಟೀಂ ಇಂಡಿಯಾ ನಾಯಕ ಕೊಹ್ಲಿ ಕೂಡಾ ಇಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ದಶಕಗಳ ಹಿಂದಿನ ದ್ರಾವಿಡ್ ವೀಡಿಯೋ ಈಗ ಯುವ ಆಟಗಾರರನ್ನು ಟೀಕೆ ಮಾಡಲು ಬಳಸಲಾಗುತ್ತಿದೆ. 

ವೀಡಿಯೋದಲ್ಲಿ ಇಂಟರ್ವ್ಯೂ ಮಾಡುತ್ತಿದ್ದಾಗ ಹುಡುಗಿ ವಿರಾಮ ವೇಳೆಯಲ್ಲಿ ತರುಣ ದ್ರಾವಿಡ್ ಜೊತೆಗೆ ಪ್ರೇಮ ನಿವೇದನೆ ಮಾಡುತ್ತಾರೆ. ಇದರಿಂದ ಕೊಪಗೊಂಡ ದ್ರಾವಿಡ್ ಸ್ಥಳದಿಂದ ಹೊರಹೋಗಲು ಪ್ರಯತ್ನ ಮಾಡುತ್ತಾರೆ. ಆದರೆ ಹುಡುಗಿ ಮತ್ತು ಆಕೆಯ ತಂದೆ ಅಡ್ಡಪಡಿಸಿದಾಗ ದ್ರಾವಿಡ್ ಆಕೆಯನ್ನು ಕುಳಿತುಕೊಳ್ಳಲು ಹೇಳಿ ನೀನಿನ್ನು ಚಿಕ್ಕವಳು. ಇದು ವಿದ್ಯಾಭ್ಯಾಸ ಮಾಡುವ ಸಮಯ, ಪ್ರೀತಿ ಪ್ರೇಮವಲ್ಲ ಎಂದು ಬುದ್ದಿ ಹೇಳುತ್ತಾರೆ. ಆದರೆ ನಿಜವಾಗಿ ಇದು ದ್ರಾವಿಡ್ ಅವರನ್ನು ಫೂಲ್ ಮಾಡುವ ಪ್ರಯತ್ನವಾಗಿತ್ತು. ರಹಸ್ಯ ಕ್ಯಾಮರಾದಲ್ಲಿ ಇವೆಲ್ಲಾ ರೆಕಾರ್ಡ್ ಆಗಿತ್ತು. ರಾಹುಲ್ ದ್ರಾವಿಡ್ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 

Trending videos

Back to Top