ನಿವೃತ್ತಿ ನಂತರ ಬ್ಯಾಟ್ ಹಿಡಿಯುದಿಲ್ಲವಂತೆ ಕೊಹ್ಲಿ
Team Udayavani, Jan 11, 2019, 9:30 AM IST
ಸಿಡ್ನಿ: “ನಾನು ಈಗಾಗಲೇ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಯಾವಾಗ ನನಗೆ ಆಡಿದ್ದು ಸಾಕು ಅಂತ ಅನಿಸುತ್ತದೆಯೋ ಆವತ್ತು ಆಟದಿಂದ ನಿವೃತ್ತಿ ಪಡೆಯುತ್ತೇನೆ. ಅದರ ನಂತರ ಬ್ಯಾಟ್ ಕೂಡಾ ಹಿಡಿಯುದಿಲ್ಲ” ಹೀಗೆ ಹೇಳಿಕೆ ಕೊಟ್ಟವರು ಟೀಂ ಇಂಡಿಯಾ ನಾಯಕ, ರನ್ ಮಶೀನ್ ವಿರಾಟ್ ಕೊಹ್ಲಿ.
ಆತಿಥೇಯ ಆಸ್ಟ್ರೇಲಿಯಾ ವಿರುದ್ದ ಶನಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತನಾಡಿದರು. ನಿವೃತ್ತಿ ನಂತರ ಬಿಗ್ ಬ್ಯಾಶ್ ಸರಣಿಯಲ್ಲಿ ಆಡುವ ಆಲೋಚನೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿರಾಟ್, ‘ ನಿವೃತ್ತಿ ನಂತರ ಮತ್ತೆ ಕ್ರಿಕೆಟ್ ಆಡುವ ಯೋಚನೆ ಇಲ್ಲ. ನನ್ನ ಆಟ ಯಾವತ್ತು ಮುಗಿಯುತ್ತೋ ಆವತ್ತು ನಾನು ವಿದಾಯ ಘೋಷಿಸುತ್ತೇನೆ. ಮತ್ತೆ ಬ್ಯಾಟ್ ಹಿಡಿಯುದಿಲ್ಲ. ನಿವೃತ್ತಿ ನಂತರ ಮೊದಲು ಏನು ಮಾಡಬೇಕು ಎಂದು ಕೂಡಾ ಯೋಚನೆ ಮಾಡಿಲ್ಲ ಎಂದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಜನವರಿ 12 ಶನಿವಾರ ಸಿಡ್ನಿಯಲ್ಲಿ ನಡೆಯಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್