ಮತ್ತೆ ಶತಕ: ಮಿಂಚಿದ ಮಾರ್ಟಿನ್‌ ಗಪ್ಟಿಲ್‌


Team Udayavani, Feb 17, 2019, 12:30 AM IST

v-18.jpg

ಕ್ರೈಸ್ಟ್‌ಚರ್ಚ್‌: ಆರಂಭಿಕಕಾರ ಮಾರ್ಟಿನ್‌ ಗಪ್ಟಿಲ್‌ ಅವರ ಸತತ 2ನೇ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್‌ ತಂಡ ಬಾಂಗ್ಲಾದೇಶದ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ 117 ರನ್‌ ಬಾರಿಸಿ ಕಿವೀಸ್‌ಗೆ ಜಯ ದೊರಕಿಸಿಕೊಟ್ಟಿದ್ದ ಗಪ್ಟಿಲ್‌ ಈ ಪಂದ್ಯದಲ್ಲಿ 118 ರನ್‌ ಗಳಿಸಿ ಮತ್ತೂಮ್ಮೆ ನ್ಯೂಜಿಲ್ಯಾಂಡ್‌ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಈ ಗೆಲುವಿನೊಂದಿಗೆ ಕಿವೀಸ್‌ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.  

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 226 ರನ್ನಿಗೆ ಆಲೌಟಾದರೆ, ನ್ಯೂಜಿಲ್ಯಾಂಡ್‌ 36.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿ ಜಯಭೇರಿ ಬಾರಿಸಿದೆ. ನಾಯಕ ಕೇನ್‌ ವಿಲಿಯಮ್ಸನ್‌ 65 ರನ್‌, ರಾಸ್‌ ಟಯ್ಲರ್‌  21 ರನ್‌ ಗಳಿಸಿ ಅಜೇಯರಾಗಿ ಉಳಿದಿರ‌ು. 

ಕಿವೀಸ್‌ ಬ್ಯಾಟಿಂಗ್‌ ಪರಾಕ್ರಮ
ಗೆಲ್ಲಲು 227 ರನ್‌ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ಮೊದಲ 3 ಓವರ್‌ಗಳಲ್ಲೇ 23 ರನ್‌ ಕಲೆ ಹಾಕಿತ್ತು. 14 ರನ್‌ ಗಳಿಸಿದ್ದ ಹೆನ್ರಿ ನಿಕೋಲ್ಸ್‌ ವಿಕೆಟ್‌ ಕಿತ್ತ ಮುಸ್ತಾಫಿಜುರ್‌ ರೆಹಮಾನ್‌ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಜತೆಯಾದ ಗಪ್ಟಿಲ್‌, ನಾಯಕ ವಿಲಿಯಮ್ಸನ್‌ ಜೋಡಿ ಬಾಂಗ್ಲಾ ಬೌಲರ್‌ಗಳ ಬೆವರಿಳಿಸುವಲ್ಲಿ ಯಶಸ್ವಿಯಾಯಿತು. ಅವರಿಬ್ಬರು 2ನೇ ವಿಕೆಟಿಗೆ  143 ರನ್‌ ಜತೆಯಾಟವಾಡಿದರು. ಗಪ್ಟಿಲ್‌ 88 ಎಸೆತಗಳಲ್ಲಿ 118 ರನ್‌ ಬಾರಿಸಿದರು. ಇದರಲ್ಲಿ 14 ಬೌಂಡರಿ, 4 ಸಿಕ್ಸರ್‌ಗಳು ಸೇರಿವೆ. ಇದು ಅವರ 16ನೇ ಶತಕವಾಗಿದ್ದು, ಈ ಋತುವಿನ 3ನೇ ಶತಕವಾಗಿದೆ. ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗಪ್ಟಿಲ್‌ 138 ರನ್‌ ಬಾರಿಸಿದ್ದರು. ಗಪ್ಟಿಲ್‌ ಔಟಾದ ವೇಳೆ ಕಿವೀಸ್‌ 2 ವಿಕೆಟಿಗೆ 188 ರನ್‌ ಗಳಿಸಿ ಗೆಲುವಿನ ಸನಿಹದಲ್ಲಿತು. ಅನಂತರ ಕೇನ್‌ ವಿಲಿಯಮ್ಸನ್‌ ನಾಯಕನ ಆಟವಾಡಿ ಅಜೇಯ 65 ರನ್‌ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.  ಇದು ಅವರ 37ನೇ ಏಕದಿನ ಅರ್ಧಶತಕವಾಗಿದೆ. ಸತತ ಎರಡು ಶತಕ ಬಾರಿಸಿದ ಗಪ್ಟಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಕಿವೀಸ್‌ ಬೌಲರ್‌ಗಳ ನಿಖರ ದಾಳಿ ಯಿಂದಾಗಿ ಬಾಂಗ್ಲಾ ಆಟಗಾರರು ರನ್‌ ಗಳಿಸಲು ಒದ್ದಾಡಿದರು. ಮಾತ್ರ ವಲ್ಲದೇ ಆಗಾಗ್ಗೆ ವಿಕೆಟ್‌ ಕಳೆದು ಕೊಳ್ಳುತ್ತ ಒತ್ತಡಕ್ಕೆ ಸಿಲುಕು
ವಂತಾಯಿತು.  ಆರಂಭಿಕರು ಬೇಗನೇ ಔಟಾದ ಕಾರಣ ಬಾಂಗ್ಲಾ  ನಿಧಾನಗತಿಯ ಆರಂಭ ಪಡೆಯಿತು. ಇದರಿಂದಾಗಿ ಮೊದಲ 21 ಓವರ್‌ಗಳಲ್ಲಿ ತಂಡ 5 ವಿಕೆಟಿಗೆ 93 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. 

ಆಬಳಿಕ ಬಾಂಗ್ಲಾಕ್ಕೆ ಆಸರೆ ಯಾದವರು ಮೊಹ ಮ್ಮದ್‌ ಮಿಥುನ್‌ ಹಾಗೂ ಸಬೀರ್‌ ರೆಹಮನ್‌. ಮಿಥುನ್‌ ಬಾಂಗ್ಲ ಪರ ಅತ್ಯಧಿಕ ರನ್‌ ಗಳಿಸಿದ ಆಟಗಾರ ಎನಿಸಿಕೊಂಡರು. ಅವರು 69 ಎಸೆತಗಳಲ್ಲಿ 57 ರನ್‌ ಬಾರಿಸಿದರು. 6ನೇ ವಿಕೆಟಿಗೆ ಸಬೀರ್‌ ರೆಹಮನ್‌ ಅವರೊಂದಿಗೆ 75 ರನ್‌ ಜತೆಯಾಟವಾಡಿ ಬಾಂಗ್ಲಾದೇಶದ ಮೊತ್ತ 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ ಕೊನೆಯ 5 ವಿಕೆಟ್‌ಗಳನ್ನು ಬಾಂಗ್ಲಾ 58 ರನ್‌ಗಳ ಅಂತರದಲ್ಲಿ ಕಳೆದುಕೊಂಡು ನಿರಾಸೆ ಮೂಡಿಸಿತು. ಲಾಕಿ ಫ‌ರ್ಗ್ಯುಸನ್‌ 3 ವಿಕೆಟ್‌ ಕಿತ್ತ‌ರು. 

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ- 49.4 ಓವರ್‌ಗಳಲ್ಲಿ 226 (ಮಿಥುನ್‌ 57, ಸಬೀರ್‌ ರೆಹಮನ್‌ 43, ಫ‌ರ್ಗ್ಯುಸನ್‌ 43ಕ್ಕೆ 3, ಜೇಮ್ಸ್‌ ನಿಶಾಮ್‌ 21ಕ್ಕೆ 2, ಟಾಡ್‌ ಆಸ್ಟಲ್‌ 52ಕ್ಕೆ 2), ನ್ಯೂಜಿ ಲ್ಯಾಂಡ್‌- 36.1 ಓವರ್‌ಗಳಲ್ಲಿ 2 ವಿಕೆಟಿಗೆ 229 (ಗಪ್ಟಿಲ್‌ 118, ವಿಲಿಯಮ್ಸನ್‌ ಔಟಾಗದೆ 65, ಟಯ್ಲರ್‌ 21). 
ಪಂದ್ಯಶ್ರೇಷ್ಠ: ಮಾರ್ಟಿನ್‌ ಗಪ್ಟಿಲ್‌.

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.