ಪಾಕ್ ಕ್ರಿಕೆಟಿಗರ ಚಿತ್ರ ತೆರವು ದುರದೃಷ್ಟಕರ: ಪಿಸಿಬಿ
Team Udayavani, Feb 19, 2019, 12:30 AM IST
ಕರಾಚಿ: ಭಾರತದ ವಿವಿಧ ಕ್ರಿಕೆಟ್ ಸ್ಟೇಡಿಯಂಗಳಲ್ಲಿದ್ದ ಇಮ್ರಾನ್ ಖಾನ್ ಫೋಟೋ ಸಹಿತ ಪಾಕಿಸ್ಥಾನ ಕ್ರಿಕೆಟಿಗೆ ಸಂಬಂಧಿಸಿದ ವಿವಿಧ ಫೋಟೋಗಳನ್ನು ಬಿಸಿಸಿಐ ತೆರವುಗೊಳಿಸಿದ ಕ್ರಮ ದುರದೃಷ್ಟಕರ ಎಂಬುದಾಗಿ ಪಿಸಿಬಿ ಹೇಳಿದೆ.
ಫೆ. 28ರಿಂದ ದುಬಾೖಯಲ್ಲಿ ಆರಂಭವಾಗಲಿರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗುವುದು ಎಂದು ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್ ಹೇಳಿದ್ದಾರೆ.
“ಕ್ರೀಡೆ ಮತ್ತು ರಾಜಕೀಯವನ್ನು ಯಾವತ್ತೂ ಪ್ರತ್ಯೇಕವಾಗಿ ಇಡಬೇಕು ಎಂಬುದು ನಮ್ಮ ಉದ್ದೇಶ. ಕ್ರೀಡೆ, ಅದರಲ್ಲೂ ಕ್ರಿಕೆಟ್ ಎನ್ನುವುದು ಜನರು ಮತ್ತು ದೇಶಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಐತಿಹಾಸಿಕ ಕ್ರಿಕೆಟ್ ಕ್ಲಬ್ಗಳು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕನೂ ಹಾಲಿ ಪ್ರಧಾನಿಯೂ ಆಗಿರುವ ಇಮ್ರಾನ್ ಖಾನ್, ಇಲ್ಲಿನ ಇತರ ಲೆಜೆಂಡ್ರಿ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸುವ ಕ್ರಮಕ್ಕೆ ಮುಂದಾದದ್ದು ನಿಜಕ್ಕೂ ದುರದೃಷ್ಟಕರ’ ಎಂದು ವಾಸಿಮ್ ಖಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!