ಹೈದರಾಬಾದ್ನಲ್ಲಿ ಆಸೀಸ್ ಕ್ರಿಕೆಟಿಗರ ಅಭ್ಯಾಸ
Team Udayavani, Feb 21, 2019, 12:30 AM IST
ಹೈದರಾಬಾದ್: ಟಿ20 ಹಾಗೂ ಏಕದಿನ ಸರಣಿಗಾಗಿ ಈಗಾಗಲೇ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯ ತಂಡ ಅಭ್ಯಾಸ ಆರಂಭಿಸಿದೆ. ಆದರೆ ಪ್ರಥಮ ಟಿ20 ಪಂದ್ಯದ ತಾಣವಾದ ವಿಶಾಖಪಟ್ಟಣ ಬಿಟ್ಟು ಹೈದರಾಬಾದ್ನ “ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂ’ನಲ್ಲಿ ಅಭ್ಯಾಸ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಭಾರತದ ವಾತಾವರಣ ಹಾಗೂ ಇಲ್ಲಿನ ಪಿಚ್ಗಳಿಗೆ ಸೀಮಿತ ಅವಧಿಯಲ್ಲಿ ಹೊಂದಿಕೊಳ್ಳಬೇಕಾದ್ದರಿಂದ ಆಸ್ಟ್ರೇಲಿಯ ಆಟಗಾರರು ವಿಶಾಖಪಟ್ಟಣದ ಪ್ರಧಾನ ಪಿಚ್ನಲ್ಲಿ ಅಭ್ಯಾಸ ನಡೆಸುವ ಯೋಜನೆ ಹಾಕಿಕೊಂಡಿತ್ತು. ಆದರೆ ಇದು ಲಭಿಸದ ಕಾರಣ ತನ್ನ ಅಭ್ಯಾಸ ತಾಣವನ್ನು ಹೈದರಾಬಾದ್ಗೆ ವರ್ಗಾಯಿಸಿತು.
“ಆಸ್ಟ್ರೇಲಿಯ ಕ್ರಿಕೆಟಿಗರು ಸಂಜೆ 4ರಿಂದ 7 ಗಂಟೆ ತನಕ ಇಲ್ಲಿನ ಪ್ರಧಾನ ಟ್ರ್ಯಾಕ್ನಲ್ಲಿ ಅಭ್ಯಾಸ ನಡೆಸಲಿದ್ದಾರೆ. ಭಾರತದ ಪರಿಸ್ಥಿತಿಗೆ ಸಾಧ್ಯವಾದಷ್ಟು ಬೇಗ ಒಗ್ಗಿಕೊಳ್ಳಬೇಕಾದ್ದರಿಂದ ಹಾಗೂ ವಿಶಾಖಪಟ್ಟಣದ ಎಚಿಎ-ವಿಡಿಸಿಎ ಪಿಚ್ಗೆ ಹಾನಿಯಾಗಬಹುದೆಂಬ ಕಾರಣಕ್ಕಾಗಿ ಆಸೀಸ್ ಆಟಗಾರರು ಹೈದರಾಬಾದ್ಗೆ ಆಗಮಿಸಿದ್ದಾರೆ’ ಎಂದು ವರದಿಯೊಂದು ತಿಳಿಸಿದೆ.
ಹೈದರಾಬಾದ್ನಲ್ಲಿ 3 ದಿನಗಳ ಕಾಲ ಅಭ್ಯಾಸ ನಡೆಸಿದ ಬಳಿಕ ಆಸ್ಟ್ರೇಲಿಯ ಕ್ರಿಕೆಟಿಗರು ವಿಶಾಖಪಟ್ಟಣಕ್ಕೆ ಆಗಮಿಸಲಿದ್ದಾರೆ. ಇಲ್ಲಿ ರವಿವಾರ ಮೊದಲ ಟಿ20 ಪಂದ್ಯ ನಡೆಯಲಿದೆ. ದ್ವಿತೀಯ ಪಂದ್ಯದ ತಾಣ ಬೆಂಗಳೂರು (ಫೆ. 27).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್