ಯೋಧರ ಕ್ಯಾಪ್ ಧರಿಸಲು ಅನುಮತಿ ಪಡೆದಿದ್ದ ಬಿಸಿಸಿಐ : ಪಾಕ್ಗೆ ಮುಖಭಂಗ
Team Udayavani, Mar 11, 2019, 1:37 AM IST
ಮುಂಬಯಿ: ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ 3ನೇ ಏಕ ದಿನ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರು ಯೋಧರ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದರು. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕ್ರಿಕೆಟಿಗರು ಗೌರವ ಸಲ್ಲಿಸಿದ್ದರು. ಇದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪಾಕಿಸ್ಥಾನ ಸರಕಾರಕ್ಕೆ ಭಾರೀ ಮುಖಭಂಗವಾಗಿದೆ.
ಮೈದಾನದಲ್ಲಿ ಯೋಧರ ಕ್ಯಾಪ್ ಧರಿಸಿ ಕಣಕ್ಕಿಳಿಯಲು, ಬಿಸಿಸಿಐ ಮುಂಚಿತವಾಗಿಯೇ ಅನುಮತಿ ಪಡೆದಿತ್ತು ಎಂದು ಸ್ವತಃ ಐಸಿಸಿಯೇ ಸ್ಪಷ್ಟನೆ ನೀಡಿದೆ. ಭಾರತೀಯ ಕ್ರಿಕೆಟಿಗರು ನೀತಿಸಂಹಿತೆ ಉಲ್ಲಂ ಸಿದ್ದಾರೆ, ಪಾಕ್ ಕ್ರಿಕೆಟ್ ಮಂಡಳಿ ದೂರು ಸಲ್ಲಿಸುವ ಮೂಲಕ ಐಸಿಸಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದ ಪಾಕಿಸ್ಥಾನವೀಗ ಹತಾಶೆಗೊಂಡಿದೆ.