ಟಿ20: ಅಮೆರಿಕ ವಿರುದ್ಧ ಯುಎಇ ಸರಣಿ ಗೆಲುವು
Team Udayavani, Mar 17, 2019, 12:30 AM IST
ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಯುಎಇ 7 ವಿಕೆಟಿಗೆ 182 ರನ್ ಪೇರಿಸಿದರೆ, ಯುಎಸ್ಎ 6 ವಿಕೆಟಿಗೆ 158 ರನ್ ಗಳಿಸಿ ಶರಣಾಯಿತು. ಯುಎಇ ಪರ ಶೈಮನ್ ಅನ್ವರ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 30 ಎಸೆತಗಳಿಂದ 62 ರನ್ ಸಿಡಿಸಿದರು (6 ಸಿಕ್ಸರ್, 3 ಬೌಂಡರಿ). ರೋಹನ್ ಮುಸ್ತಾಫಾ 45 ರನ್ ಹೊಡೆದರು (38 ಎಸೆತ, 7 ಬೌಂಡರಿ). ಅಮೆರಿಕ ಸರದಿಯಲ್ಲಿ 49 ರನ್ ಮಾಡಿದ ಸ್ಟೀವನ್ ಟಯ್ಲರ್ ಅವರದು ಹೆಚ್ಚಿನ ಗಳಿಕೆಯಾಗಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.