ಏಶ್ಯನ್ ಯೂತ್ ಆ್ಯತ್ಲೆಟಿಕ್ಸ್: ಭಾರತಕ್ಕೆ ದ್ವಿತೀಯ ಸ್ಥಾನ
Team Udayavani, Mar 19, 2019, 12:45 AM IST
ಹಾಂಕಾಂಗ್: “ಏಶ್ಯನ್ ಯೂತ್ ಆ್ಯತ್ಲೆಟಿಕ್ ಚಾಂಪಿಯನ್ಶಿಪ್ ಕೊನೆಯ ದಿನ ಭಾರತದ ಮಿಡ್ಲೆ ರಿಲೇ ತಂಡ ಚಿನ್ನದ ಪದಕ ಜಯಿಸಿದೆ. ಇದರೊಂದಿಗೆ ಭಾರತೀಯ ಯುವ ತಂಡ ಒಟ್ಟು 26 ಪದಕಗಳನ್ನು ಜಯಿಸಿ ಕೂಟವನ್ನು ಕೊನೆಗೊಳಿಸಿದೆ.
ಭಾರತ 8 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕ ಜಯಿಸಿ ಚೀನಕ್ಕಿಂತ ಹಿಂದುಳಿಯಿತು. ಚೀನ 12 ಚಿನ್ನ, 11 ಬೆಳ್ಳಿ ಹಾಗೂ 8 ಕಂಚಿನ ಪದಕಗಳೊಂದಿಗೆ ಒಟ್ಟು 31 ಪದಕಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿತು. ಜಪಾನ್ 20 ಪದಕಗಳನ್ನು ಗೆದ್ದು 3ನೇ ಸ್ಥಾನ ಸಂಪಾದಿಸಿದೆ (6 ಚಿನ್ನ, 8 ಬೆಳ್ಳಿ, 6 ಕಂಚು).
ಏಶ್ಯನ್ ಯೂತ್ ಆ್ಯತ್ಲೆಟಿಕ್ಸ್ನಲ್ಲಿ ಪದಕ ಗೆದ್ದ ಭಾರತ ತಂಡ.