ಬಾಂಗ್ಲಾ ವಿರುದ್ಧ ಭಾರತವೇ ಫೇವರಿಟ್
Team Udayavani, Mar 20, 2019, 12:30 AM IST
ಬಿರಾಟ ನಗರ: ಸ್ಯಾಫ್ ವನಿತಾ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಅಜೇಯ ಮತ್ತು 4 ಬಾರಿಯ ಚಾಂಪಿಯನ್ ಭಾರತ ಬುಧವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಫೇವರಿಟ್ ತಂಡವಾಗಿದೆ.2010ರ ಉದ್ಘಾಟನ ಆವೃತ್ತಿಯಿಂದ ಹಿಡಿದು ಇಲ್ಲಿಯ ವರೆಗೆ ಭಾರತ ಯಾವುದೇ ಪಂದ್ಯಗಳಲ್ಲಿ ಸೋತಿಲ್ಲ. ಕೂಟದ 4 ಆವೃತ್ತಿಯಲ್ಲೂ ಪ್ರಶಸ್ತಿ ಜಯಿಸಿದೆ. 2016ರ ಆವೃತ್ತಿಯ ಫೈನಲ್ನಲ್ಲಿ ಭಾರತದ ವನಿತೆಯರು ಬಾಂಗ್ಲಾ ವನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಈಗಾಗಲೇ ಗುಂಪು ಹಂತದ ಪಂದ್ಯಗಳಲ್ಲಿ ಮಾಲ್ಡೀವ್ಸ್ (6-0), ಶ್ರೀಲಂಕಾ (5-0) ವಿರುದ್ಧ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಸತತ 5ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.