CONNECT WITH US  

​ಕೆ.ವಿ.ತಿರುಮಲೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಉದಯವಾಣಿ ದೆಹಲಿ ಪ್ರತಿನಿಧಿ: ಕನ್ನಡದ ಖ್ಯಾತ ಬರಹಗಾರ ಕೆ.ವಿ.ತಿರುಮಲೇಶ್‌ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದೆ. ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅಕಾಡೆಮಿ ಕಾರ್ಯದರ್ಶಿ ಡಾ.ಕೆ. ಶ್ರೀನಿವಾಸ ರಾವ್‌ ಈ ಪ್ರಶಸ್ತಿ ಘೋಷಿಸಿದರು. ತಿರುಮಲೇಶ್‌ ಅವರ ಕವನ ಸಂಗ್ರಹ "ಅಕ್ಷಯ ಕಾವ್ಯ'ಕ್ಕೆ 2015ರ ಸಾಲಿನ  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಗಿದೆ. ಪ್ರಶಸ್ತಿ 1 ಲಕ್ಷ ರೂ.ಗಳ ನಗದು ಪುರಸ್ಕಾರ, ತಾಮ್ರದ ಫ‌ಲಕ ಒಳಗೊಂಡಿದೆ. ಫೆ.16ರಂದು ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿಯಲ್ಲಿ ಅಕ್ಷರ ಉತ್ಸವ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಸಾಹಿತಿಗಳಾದ ಜಿ.ಎನ್‌.ರಂಗನಾಥ್‌ ರಾವ್‌, ಹೇಮಾ ಪಟ್ಟಣಶೆಟ್ಟಿ, ರಾಘವೇಂದ್ರ ಪಾಟೀಲ್‌ ಅವರಿದ್ದ ಆಯ್ಕೆ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದೇಶದ ಒಟ್ಟೂ 23 ಭಾಷೆಗಳ ಕೃತಿಗಳಿಗೆ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದ್ದು, ಆರು ಕವನ ಸಂಗ್ರಹ, ನಾಲ್ಕು ಕಾದಂಬರಿ, ತಲಾ ಎರಡು ವಿಮರ್ಶೆ, ನಾಟಕ, ಪ್ರಬಂಧ ಮತ್ತು ಒಂದು ಸ್ಮರಣ ಸಂಚಿಕೆಗೆ ಪ್ರಶಸ್ತಿ ಸಂದಿದೆ.

Trending videos

Back to Top