CONNECT WITH US  

ಷರೀಫ್, ಮೊಮ್ಮಗ ಜೆಡಿಎಸ್‌ ಸೇರೋದು ವದಂತಿ: ಗೌಡ

ಬೆಂಗಳೂರು: ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಶಾಸಕ ಜಮೀರ್‌ ಅಹಮ್ಮದ್‌ ಮತ್ತು ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಾಜಿ ಸಚಿವ ಜಾಫ‌ರ್‌ ಷರೀಫ್ ಅವರ ಮೊಮ್ಮಗ ರೆಹಮಾನ್‌ ಷರೀಫ್ ಜೆಡಿಎಸ್‌ ಸೇರ್ಪಡೆಯಾಗುವುದು ಊಹಾಪೋಹದ ಸುದ್ದಿ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕ ಜಮೀರ್‌ ಅಹಮ್ಮದ್‌ ಮತ್ತು ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ ಭೇಟಿ ಕೇವಲ ಸಮುದಾಯದ ಸಂಬಂಧವಷ್ಟೇ. ಸಮುದಾಯದ ನಾಯಕರು ಮಾತುಕತೆ ನಡೆಸಿ¨ªಾರೆ. ಇಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಹೆಬ್ಟಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಜೆಡಿಎಸ್‌ನ ಮೂವರು ಶಾಸಕರಿದ್ದಾರೆ. ಜಮೀರ್‌ ಅಹಮ್ಮದ್‌ ಮಾಜಿ ಸಚಿವರು ಎನ್ನುವ ಕಾರಣಕ್ಕೆ ಹೆಬ್ಟಾಳ ಕ್ಷೇತ್ರದ ಉಪಚುನಾವಣೆಗೆ ಸಂಬಂಧಪಟ್ಟಂತೆ ಉಸ್ತುವಾರಿ ವಹಿಸಲಾಗಿದೆ. ಬೀದರ್‌ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ನೋಡಿಕೊಳ್ಳುವಂತೆ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್‌ಗೆ ತಿಳಿಸಲಾಗಿದೆ. ಈ ಇಳಿ ವಯಸ್ಸಿನಲ್ಲಿ ತಾವು ಎಲ್ಲ ಕಡೆ ಸುತ್ತಾಡಲು ಸಾಧ್ಯವಾಗದಿರುವ ಕಾರಣ ಪಕ್ಷದ ಪ್ರಮುಖರಿಗೆ ನಾಯಕತ್ವ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.

ಉಪಚುನಾವಣೆ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಪಕ್ಷದ ಅಭ್ಯರ್ಥಿಗಳಿಗೆ ಬಿಫಾರಂ ವಿತರಣೆ ಮಾಡಲಾಗುವುದು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಫೆ.1ರೊಳಗೆ ಮೊದಲನೆ ಹಂತಕ್ಕೆ ಹಾಗೂ ಫೆ.8ರೊಳಗೆ ಎರಡನೇ ಹಂತಕ್ಕೆ ಪಕ್ಷದ ಬಿ ಫಾರಂ ವಿತರಣೆ ಮಾಡಲಾಗುವುದು ಎಂದರು.

ರೆಹಮಾನ್‌ ಷರೀಫ್ ಜೆಡಿಎಸ್‌ ಸೇರ್ಪಡೆ ಬಗ್ಗೆ ಚರ್ಚಿಸುವ ಸಂಬಂಧ ಈವರೆಗೆ ತಮ್ಮನ್ನು ಯಾರೂ ಸಂಪರ್ಕಿಸಿಲ್ಲ. ದೂರವಾಣಿ ಮೂಲಕವೂ ವಿಷಯ ಪ್ರಸ್ತಾಪವಾಗಿಲ್ಲ. ಈ ಸಂಬಂಧ ಹರಿದಾಡುತ್ತಿರುವ ವರದಿಗಳು ಊಹಾಪೋಹದಿಂದ ಕೂಡಿದೆ. ಜಾಫ‌ರ್‌ ಷರೀಫ್ ಜೆಡಿಎಸ್‌ ಸೇರುತ್ತಾರೆ ಎಂಬ ವರದಿಯೂ ಸತ್ಯಕ್ಕೆ ದೂರವಾದುದು. ವಿನಾಕಾರಣ ಅವರ ಕುಟುಂಬಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ ಎಂದು ನುಡಿದರು. 

Trending videos

Back to Top