CONNECT WITH US  

ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2014ನೇ ಸಾಲಿನ ಗೌರವ ಪ್ರಶಸ್ತಿಗಳು ಘೋಷಣೆಯಾಗಿದ್ದು, ಹಿರಿಯ ಸಂಶೋಧಕ ಷ.ಶೆಟ್ಟರ್‌, ಚಿಂತಕ ಡಾ| ಜಿ.ರಾಮಕೃಷ್ಣ, ಕವಿ ಸುಬ್ರಾಯ ಚೊಕ್ಕಾಡಿ, ಕವಯತ್ರಿಯರಾದ ಧಾರವಾಡದ ಪ್ರೊ| ಸುಕನ್ಯಾ ಮಾರುತಿ ಮತ್ತು ಶಿವಮೊಗ್ಗ ಸವಿತಾ ನಾಗಭೂಷಣ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದಲ್ಲದೆ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಪುಸ್ತಕ ಪ್ರಶಸ್ತಿ ಮತ್ತು 6 ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಗೌರವ ಪ್ರಶಸ್ತಿ ತಲಾ 10 ಸಾವಿರ ನಗದು ಒಳಗೊಂಡಿದ್ದರೆ, ಪುಸ್ತಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ನಗದನ್ನು ಒಳಗೊಂಡಿವೆ. ಗೌರವ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ಎ.29ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಖ್ಯಾತ ಭಾಷಾಶಾಸ್ತ್ರಜ್ಞ ಡಾ| ಗಣೇಶ್‌ದೇವಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ| ಮಾಲತಿ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

2013ರ ದತ್ತಿನಿಧಿ ಬಹುಮಾನ
ಚದುರಂಗ ದತ್ತಿನಿಧಿ ಪ್ರಶಸ್ತಿ- ಸಿ.ಆರ್‌.ಪಾರ್ಥಸಾರಥಿ (ಅನಾವರಣ- ಕಾದಂಬರಿ); ಸಿಂಪಿ ಲಿಂಗಣ್ಣ ದತ್ತಿನಿಧಿ ಪ್ರಶಸ್ತಿ- ಗುಂಡಪ್ಪ ದೇವಿಗೇರಿ (ನೆಲದೊಡಲ ಚಿಗುರು- ಜೀವನಚರಿತ್ರೆ); ಪಿ.ಶ್ರೀನಿವಾಸರಾವ್‌ ದತ್ತಿನಿಧಿ ಪ್ರಶಸ್ತಿ- ಬಸವರಾಜ ಸಬರದ (ಸಾಹಿತ್ಯ ಸಿಂಚನ- ಸಾಹಿತ್ಯ ವಿಮರ್ಶೆ); ಎಲ್‌. ಗುಂಡಪ್ಪ- ಶಾರದಮ್ಮ ದತ್ತಿನಿಧಿ ಪ್ರಶಸ್ತಿ- ಡಾ| ಅಶೋಕ್‌ಕುಮಾರ್‌ (ಕುರಿಂಜಿ ಜೇನು- ಅನುವಾದ ಕೃತಿ); ಮಧುರಚೆನ್ನ ದತ್ತಿನಿಧಿ- ರಮೇಶ್‌ ಮ.ಕಲ್ಲನಗೌಡರ್‌ (ಅಮೃತಕ್ಕೆ ಹಾರಿದ ಗರುಡ- ಮೊದಲ ಕೃತಿ); ಅಮೆರಿಕನ್ನಡ ದತ್ತಿನಿಧಿ- ದೀಪಾ ಗಣೇಶ್‌ (ಹಂಟ್‌ ಬ್ಯಾಂಗಲ್‌ ಕೆಮಿಲಿಯನ್‌- ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ).

Trending videos

Back to Top