CONNECT WITH US  

ಉಕ್ಕಿ ಹರಿದ ಮಲಪ್ರಭೆ, 2 ಲಾರಿ ನೀರು ಪಾಲು

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿ ಉಕ್ಕಿ ಹರಿದಿದೆ. ಈ ವೇಳೆ ಬೈಕ್‌ಗಳನ್ನು ತುಂಬಿದ್ದ ಲಾರಿ ಸಹಿತ 2 ಟ್ರಕ್‌ಗಳು, 15ಕ್ಕೂ ಹೆಚ್ಚು ಕುರಿಗಳು ಮಲಪ್ರಭೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಾದಾಮಿ ತಾಲೂಕಿನ ಗೋವನಕೊಪ್ಪ- ಕೊಣ್ಣೂರು ನಡುವಣ ಸೇತುವೆ ಮೇಲೆ ಮಲಪ್ರಭೆ ಉಕ್ಕೇರಿದ್ದರಿಂದ ಹುಬ್ಬಳ್ಳಿ- ವಿಜಯಪುರ ರಸ್ತೆ ಸಂಚಾರ 16 ಗಂಟೆ ಕಾಲ ಸ್ಥಗಿತಗೊಂಡಿತ್ತು.

ಬೆಳಗಾವಿ, ಕಲಬುರಗಿ, ವಿಜಯಪುರ, ಗದಗ, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಾಗಲಕೋಟೆ, ಗದಗ ಜಿಲ್ಲೆ ವಿವಿಧೆಡೆ ಸೇರಿದಂತೆ ಸುರಿದ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದಿದೆ.

Trending videos

Back to Top