CONNECT WITH US  

ಜಾರಕಿಹೊಳಿ ಕಾಲಿಗೆ ಬಿದ್ದು ಅತ್ತ ಹಂಡಿಬಾಗ ತಂದೆ

ರಾಯಬಾಗ: ಮೃತ ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಅವರ ಹಂದಿಗುಂದ ಗ್ರಾಮದ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಚಿವರು ಆಗಮಿಸುತಿದ್ದಂತೆ ಕಲ್ಲಪ್ಪ ಹೆತ್ತವರ ದುಃಖದ ಕಟ್ಟೆಯೊಡೆಯಿತು. ಸಚಿವರ ಕಾಲಿಗೆ ಬಿದ್ದು ಕಣ್ಣೀರಿಟ್ಟ ತಂದೆ ಬಸಪ್ಪ, "ನಾವು ಭಾಳ ಬಡವರಿ, ಕೂಲಿ-ನಾಲಿ ಮಾಡಿ ಮಕ್ಕಳನ್ನ ಓದಿಸಿ, ಸಾಲಿ ಕಲಿಸೀನ್ರಿ. ನನ್ನ ಮಗ ತೀರಿ ಹೋದರಿ. 

ನಮಗ ಇನ್ನ ಯಾರು ಗತೀರಿ?' ಎಂದು ಅಳಲು ತೋಡಿಕೊಂಡರು. ತಾಯಿ ಬಸವ್ವ ಮಾತನಾಡಿ, ಕುಳಿತು ಉಣ್ಣು ವಯಸ್ಸಿನ್ಯಾಗ ತಂದ ಹಾಕುವವನೇ ಇಲ್ಲ. ನನ್ನ ಮಗನ ಸಾವಿಗೆ ಕಾರಣ ಆದವರನ್ನು ಸುಮ್ಮನೆ ಬಿಡಬೇಡಿ. ಅವನ ಪ್ರಾಮಾಣಿಕತೆಗೆ ನಾವು ವಾಸವಾಗಿರುವ ಆಶ್ರಯ ಮನೆಯೇ ಸಾಕ್ಷಿ. ಸರ್ಕಾರದಿಂದ ನಮ್ಮ ಕುಟುಂಬಕ್ಕೆ ಪರಿಹಾರ ಕೊಡಿಸಿ' ಎಂದು ಕೋರಿದರು. ಈ ಸಂದರ್ಭ ಮಾತನಾಡಿದ ಜಾರಕಿಹೊಳಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರಧನ ಹಾಗೂ ಪತ್ನಿ, ಪದವೀಧರ ಸಹೋದರನಿಗೆ ಸರ್ಕಾರಿ ಕೆಲಸ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಆಶ್ರಯ ಮನೆಯಲ್ಲೇ ವಾಸ:
ತಾಯಿ ಬಸವ್ವ ಮಾತನಾಡಿ, "ನನ್ನ ಮಗನ ಸಾವಿನಿಂದ ನಮಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗೈತಿ. ಕುಳಿತು ಉಣ್ಣು ವಯಸ್ಸಿನ್ಯಾಗ ತಂದ ಹಾಕುವವನೇ ಇಲ್ಲ. ನನ್ನ ಮಗನ ಸಾವಿಗೆ ಕಾರಣ ಆದವರನ್ನು ಸುಮ್ಮನೆ ಬಿಡಬೇಡಿ. ಅವನ ಪ್ರಾಮಾಣಿಕತೆಗೆ ನಾವು ವಾಸವಾಗಿರುವ ಆಶ್ರಯ ಮನೆಯೇ ಸಾಕ್ಷಿ.ಸರ್ಕಾರದಿಂದ ನಮ್ಮ ಕುಟುಂಬಕ್ಕೆ ಪರಿಹಾರ ಕೊಡಿಸಿ' ಎಂದು ಕೋರಿದರು.

Trending videos

Back to Top