CONNECT WITH US  

ಗಣಪತಿ ಮನೆಗೆ ಇಂದು ಬಿಜೆಪಿ ಶಾಸಕರು

ಬೆಂಗಳೂರು: ಕಳೆದ ಮೂರು ದಿನಗಳಿಂದ ವಿಧಾನಮಂಡಲದ ಉಭಯ ಸದನಗಳಲ್ಲಿ ಸತತವಾಗಿ ಧರಣಿ ನಡೆಸಿದ ಪ್ರಮುಖ ವಿಪಕ್ಷ ಬಿಜೆಪಿಯ ಶಾಸಕರು ಆತ್ಮಹತ್ಯೆ ಮಾಡಿಕೊಂಡಗಣಪತಿ ನಿವಾಸಕ್ಕೆ ಶನಿವಾರ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮತ್ತು ವಿಧಾನಪರಿಷತ್ತಿನ ವಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಶಾಸಕರು ಕೊಡಗು ಜಿಲ್ಲೆಯ ರಂಗಸಮುದ್ರಕ್ಕೆ ತೆರಳಿ ಗಣಪತಿ ಅವರ ಕುಟುಂಬದ ಸದಸ್ಯರನ್ನು ಕಾಣಲಿದ್ದಾರೆ. 

Trending videos

Back to Top