CONNECT WITH US  

ನಮ್ಮ ಡ್ಯಾಂನ ನೀರು ನಮಗೆ ಇಲ್ಲ ,ಗಾಂಧಿ ಮಾರ್ಗದಲ್ಲಿ ಹೋರಾಡೋಣ 

ಬೆಂಗಳೂರು : ನಾವು ಕಟ್ಟಿದ ಕೆಆರ್‌ಎಸ್‌ ಡ್ಯಾಂನ ನೀರನ್ನು ನಮಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸುಪ್ರೀಂ ತೀರ್ಪಿಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ. 

ಬೆಂಗಳೂರಿನ ಗಾಂಧಿ ಭವನದಲ್ಲಿ ಗಾಂಧಿ ಜಯಂತಿ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಸಿಎಂ 'ರಾಜ್ಯದ ರೈತರಿಗೆ ನೆರವಾಗಲೆಂದು ಕೃಷ್ಣ ರಾಜಸಾಗರ ಅಣೆಕಟ್ಟನ್ನು ಮೈಸೂರು ರಾಜ ವಂಶಸ್ಥರು ಬಹಳ ಕಷ್ಟ ಪಟ್ಟು ಕಟ್ಟಿದ್ದರು. ಇದಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ರಾಜಮನೆತನದ ಅಪರೂಪದ ಚಿನ್ನಾಭರಣಗಳನ್ನೂ ಮಾರಾಟ ಮಾಡಿದ್ದರು. ಆದರೆ ಈಗ ನಾವು ಕಟ್ಟಿದ ಡ್ಯಾಂನ ನೀರನ್ನು ನಮ್ಮ ರೈತರಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದರು. 

ನಮ್ಮಲ್ಲಿ ನೀರು ಇಲ್ಲದ ಕಾರಣ ಕೃಷಿ ಬಿಟ್ಟು ಕುಡಿಯಲು ಮಾತ್ರ ಬಳಕೆ ಮಾಡುತ್ತೇವೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ,ಈಗಾಗಲೇ 52 ಟಿಎಂಸಿ ನೀರು ಬಿಟ್ಟಿದ್ದೇವೆ .ಅನಾನೂಕೂಲ ಇದ್ದಾಗ ನೀರು ಬಿಡಲು ಸಾದ್ಯವಿಲ್ಲ ಎಂದಿದ್ದೇವೆ. ನಮ್ಮನ್ನು ವಿಲನ್‌ ರೀತಿ ನೋಡಲಾಗುತ್ತಿದೆ ಎಂದು ತೀವ್ರ ಅಸಮಧಾನ ಹೊರಹಾಕಿದರು. 

ಕೋರ್ಟ್‌ನ ಮೇಲೆ ನಮಗೆ ಅಪಾರ ಗೌರವವಿದೆ ಆದರೆ ಜನಸಾಮಾನ್ಯರ ಬದುಕಿಗಾಗಿ ನೀರು ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ನಾವು ಗಾಂಧಿ ಮಾರ್ಗದಲ್ಲಿ ಹೋರಾಟ ಮಾಡುವುದೊಂದೆ ಉಳಿದಿರುವ ಮಾರ್ಗ ಎಂದು ಸಿಎಂ ಹೇಳಿದರು. 


Trending videos

Back to Top