CONNECT WITH US  

ಕಿಡ್ನಾಪೇ ಆಗಿರ್ಲಿಲ್ಲ: ಡಿವೈಎಸ್ಪಿ ಕಲ್ಲಪ್ಪ ಪ್ರಕರಣಕ್ಕೆ ಟ್ವಿಸ್ಟ್‌

ಚಿಕ್ಕಮಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್‌ ಆತ್ಮಹತ್ಯೆಗೆ ಉದ್ಯಮಿ ತೇಜಸ್‌ ಮಾಡಿರುವ ಸಂಚೇ ಕಾರಣ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ನಟರಾಜ್‌ ಹೇಳಿದ್ದಾನೆ. 

ಗುರುವಾರ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿರುವ ನಟರಾಜ್‌ 'ಹಂಡಿಭಾಗ್‌ ಅವರ ಆತ್ಮಹತ್ಯೆಗೆ ಉದ್ಯಮಿ ಎಚ್‌.ಎಮ್‌.ತೇಜಸ್‌ ಗೌಡ ಮಾಡಿದ್ದ ಸಂಚು ಮುಖ್ಯ ಕಾರಣ. ಜೂಜು, ಬೆಟ್ಟಿಂಗ್‌ ಜಾಲದಲ್ಲಿ ತೊಡಗಿಸಿಕೊಂಡಿದ್ದ ತೇಜಸ್‌ಗೆ ಹಂಡಿಭಾಗ್‌ ಅವರು ಎಚ್ಚರಿಕೆ ನೀಡಿ ಎದುರು ಹಾಕಿಕೊಂಡಿದ್ದರು. ಹೀಗಾಗಿ ತೇಜಸ್‌ ಹಂಡಿಭಾಗ್‌ ವಿರುದ್ಧ  ಹುನ್ನಾರ ನಡೆಸಿ ಅಪಹರಣ ಪ್ರಕರಣದಲ್ಲಿ ಸಿಲುಕಿಸಿದ. ನಿಜವಾಗಲೂ ಅಪಹರಣವೇ ನಡೆದಿರಲಿಲ್ಲ. ತೇಜಸ್‌ ಸ್ವತಃ ಅಭಿಷೇಕ್‌ ಜೊತೆ ಬೆಂಗಳೂರಿಗೆ ತೆರಳಿ ಅಪಹರಣದ ಕತೆ ಕಟ್ಟಿ ಒಂದೇ ಬಾಣದಲ್ಲಿ 2 ಹಕ್ಕಿ ಹೊಡೆದಿದ್ದ'ಎಂದು ಹೇಳಿಕೆ ನೀಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ನೀಡಿದ್ದಾನೆ. 

Trending videos

Back to Top