CONNECT WITH US  

ನಿರ್ಮಲಾನಂದ ಶ್ರೀಗಳ ಎದುರೇ ಸಚಿವ ಡಿಕೆಶಿಯಿಂದ ಅಪ್ಪಾಜಿ ಗೌಡಗೆ ಧಮ್ಕಿ!

ಬೆಂಗಳೂರು : ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಎದುರೇ ಸಚಿವ ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರಿಗೆ ಧಮ್ಕಿ ಹಾಕಿದ ಘಟನೆ ಶುಕ್ರವಾರ ನಡೆಯಿತು. 

ಶ್ರೀಗಂಧ ಕಾವಲ್‌ನಲ್ಲಿ ನಡೆದ ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಶಿವಕುಮಾರ್‌ ಅವರು 'ಒಕ್ಕಲಿಗ ಸಂಘದಲ್ಲಿರುವ ಗೊಂದಲಗಳನ್ನು ಬಗೆಹರಿಸಿ,ಇಲ್ಲದಿದ್ದರೆ ನಮಗೆ ಪ್ಯಾಕಪ್‌ ಮಾಡಲು ಬರುತ್ತದೆ' ಎಂದು ಎಚ್ಚರಿಕೆ ನೀಡಿದರು. 

ಸ್ವಾಮೀಜಿಗಳು 5 ವರ್ಷ ರಾಜ್ಯ ಆಳಬೇಕು !

ಸಮಾರಂಭದಲ್ಲಿ ನಿರ್ಮಾಪಕ, ಶಾಸಕ ಮುನಿರತ್ನ ಭಾಷಣ ಮಾಡಿ'ರಾಜಕಾರಣಿಗಳ ಆಳ್ವಿಕೆ ನೋಡಿ ಬೇಸರ ಬಂದಿಗದೆ ಇನ್ನು ಸ್ವಾಮೀಜಿಯೊಬ್ಬರು 5 ವರ್ಷಗಳ ಕಾಲ ರಾಜ್ಯವನ್ನು ಆಳಬೇಕು' ಎಂದರು. 

ಇದಕ್ಕೆ ಮಾರ್ಮಿಕವಾಗಿ ವೇದಿಕೆಯಲ್ಲೇ ತಮ್ಮ ಭಾಷಣದ ವೇಳೆ ಉತ್ತರ ನೀಡಿದ ನಿರ್ಮಲಾನಂದ ಶ್ರೀಗಳು 'ಮುನಿರತ್ನ ಹೇಳಿದಂತೆ ಸ್ವಾಮೀಜಿಗಳು ರಾಜ್ಯ ಆಳುವುದು ಸಾಧ್ಯವಿಲ್ಲ ಆದರೆ ಶ್ರೀಗಳ ಸಂಕಲ್ಪ ಶಕ್ತಿಯಿಂದ, ಜ್ಞಾನ ಶಕ್ತಿಯಿಂದ ರಾಜಕಾರಣಿಗೆ ಹುದ್ದೆ ಸಿಗುತ್ತದೆ. ಶ್ರೀಗಳ ಸಂಕಲ್ಪ ಶಕ್ತಿಯಿಂದ ನಮ್ಮ ಸಮಾಜದ ವರು ವಿದೇಶಾಂಗ ಸಚಿವರಾದರು, ಕೆಲವರು ಮುಖ್ಯಮಂತ್ರಿಗಳೂ ಆದರು' ಎಂದರು. 

Trending videos

Back to Top