CONNECT WITH US  

ಜೆಡಿಎಸ್‌ಗೆ ಹೋಗಲ್ಲ, ಕಾಂಗ್ರೆಸ್ಸಲ್ಲೇ ಇರುತ್ತೇನೆ

ಬಾಗಲಕೋಟೆ: ಜೆಡಿಎಸ್‌ ಸೇರ್ಪಡೆ ಕುರಿತ ವದಂತಿಗಳನ್ನು ಶಾಸಕ ಹಾಗೂ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ. ಮುಂದೆಯೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. 

ಮಾಜಿ ಪ್ರಧಾನಿ ದೇವೇಗೌಡರನ್ನು ನಾನು ಭೇಟಿಯಾಗಿ ಮಾತನಾಡಿಲ್ಲ. ಅವರೇ ಒಂದು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು. ಆದರೆ, ಜೆಡಿಎಸ್‌ ಸೇರುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಮೈಸೂರಿನ ನಂಜನಗೂಡು ಉಪ ಚುನಾವಣೆಗೆ ಕಾಂಗ್ರೆಸ್‌ ಪರವಾಗಿ ಪ್ರಚಾರಕ್ಕೂ ಹೋಗುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಕೆಲವೆಡೆ ಅಸಮತೋಲನ ಆಗುತ್ತಿದೆ. ಅದನ್ನು ಮುಖ್ಯಮಂತ್ರಿಗಳು ಸರಿಪಡಿಸಿಕೊಂಡು ಹೋಗಬೇಕು ಸಲಹೆ ಮಾಡಿದರು.ಎಂದು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಕೂಡ ಅದನ್ನೇ ಹೇಳಿದ್ದಾರೆ. ಯಾವುದೇ ಸರ್ಕಾರ ಬಂದರೂ ಕೆಲವೊಂದು ಅಸಮತೋಲನ ಆಗುವುದು ಸಹಜ. ಹಾಗೆಯೇ ಈಗಲೂ ಆಗಿದೆ. ಅದನ್ನು ಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಟಿಪ್ಪು ಜಯಂತಿ ಖಚಿತ: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಟಿಪ್ಪು ಜಯಂತಿ ಘೋಷಣೆ ಮಾಡಿದಾಗಲೂ ವಿರೋಧ ವ್ಯಕ್ತವಾಗಿತ್ತು. ಆದರೂ ಜಯಂತಿ ಆಚರಣೆ ಮಾಡಲಾಗಿದೆ. ಈಗಲೂ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತದೆ. ಟಿಪ್ಪು ಜಯಂತಿಯಿಂದಲೇ ಕೋಮು- ಗಲಭೆ ಸೃಷ್ಟಿಯಾಗಿದೆ ಎಂದು ಕೆಲವರು ಆರೋಪಿಸಿರುವುದು ಸುಳ್ಳು. ಕೊಡಗು ಸೇರಿ ಕೆಲವೆಡೆ ಆಗಿರುವ ಹಲ್ಲೆ, ಕೊಲೆಗಳು ವೈಯಕ್ತಿಕ ದ್ವೇಷದಿಂದ ಎಂಬ ಸಂಗತಿ ಹೊರಬಿದ್ದಿದೆ. ಇದಕ್ಕೆ ಟಿಪ್ಪು ಜಯಂತಿ ಆಚರಣೆ ಕಾರಣವಲ್ಲ ಎಂದು ನುಡಿದರು.

ಸಾಕ್ಷಿ ಇದೆಯೇ?ಬೆಂಗಳೂರಲ್ಲಿ ಆರ್‌ಎಸ್‌ಎಸ್‌ ಮುಖಂಡನ ಕೊಲೆಗೆ ಸಂಬಂಧಪಟ್ಟಂತೆ ಸಚಿವ ರೋಷನ್‌ ಬೇಗ್‌ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಕ್ಕೆ ಕಿಡಿಕಾರಿದ ಅವರು, ಶೋಭಾ ಬಳಿ ಸಾಕ್ಷಿಯಿದೆಯೇ? ವಿನಾಕಾರಣ ಈ ರೀತಿ ಆರೋಪಿಸುವುದು ಸರಿಯಲ್ಲ ಎಂದರು.

Trending videos

Back to Top