CONNECT WITH US  

ಕಾಂಗ್ರೆಸ್‌ ಶಾಸಕನಿಂದ ಯುವಕನ ಸಾವಿಗೆ ಕಾರಣವಾದ ರೌಡಿ ಶೀಟರ್‌ ರಕ್ಷಣೆ?

ಆನೇಕಲ್‌:  ಪ್ರೇಮಿಯೊಬ್ಬನಿಗೆ ಬೆದರಿಕೆ ಹಾಕಿದ ರೌಡಿ ಶೀಟರ್‌ ಒಬ್ಬನನ್ನು   ಕಾಂಗ್ರೆಸ್‌ ಶಾಸಕ ಶಿವಣ್ಣ ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ರಕ್ಷಣೆಗೆ ಯತ್ನಿಸಿರುವುದು ಬಹಿರಂಗವಾಗಿದೆ. ಪೊಲೀಸರಿಗೆ ಕರೆ ಮಾಡಿ ಆರೋಪಿಯ ರಕ್ಷಣೆಗೆ ಯತ್ನಿಸಿರುವ ದೂರವಾಣಿ ಸಂಭಾಷಣೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. 

ಏನಿದು ಪ್ರಕರಣ ? 

ಅಕ್ಟೋಬರ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಆನೇಕಲ್‌ನ ರಂಜಿತ್‌ ಎಂಬ ಯುವಕನ ಪ್ರೀತಿಗೆ ಅಡ್ಡಬಂದು ,ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ರೌಡಿ ಶೀಟರ್‌ ಶ್ರೀನಿವಾಸ್‌ ಅಲಿಯಾಸ್‌ ಸಂಭಯ್ಯ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆಯಲಾಗಿತ್ತು. 

ಡೆತ್‌ನೋಟ್‌ನ ಅನ್ವಯ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾದ ಸರ್ಜಾಪುರ ಪಿಎಸ್‌ಐ ಶ್ರೀನಿವಾಸ್‌ ಅವರಿಗೆ ಶಾಸಕ ಶಿವಣ್ಣ ಕರೆ ಮಾಡಿ ಸಂಭಯ್ಯನ ವಿರುದ್ಧ ಪ್ರಕರಣ ದಾಖಲಿಸದಂತೆ ಧಮ್ಕಿ ಹಾಕಿದ್ದಾರೆ. ಅವನು ನಮ್ಮ ಹುಡುಗ ಅವನ ವಿರುದ್ಧ ಪ್ರಕರಣ ದಾಖಲಿಸಬೇಡಿ ಎಂದು ಆರೋಪಿಯ ರಕ್ಷಣೆಗೆ ಯತ್ನಿಸಿದ್ದಾರಲ್ಲದೆ  ಬಳಿಕ ಪಿಎಸ್‌ಐಯ ವರ್ಗಾವಣೆಯನ್ನೂ ಮಾಡಿಸಿದ್ದಾರೆ.

ಪ್ರೀತಿಸುತ್ತಿದ್ದ ಸರ್ಜಾಪುರದ ಯುವತಿಯ ಮನೆಗೆ ರಂಜಿತ್‌ ತೆರಳಿದ್ದ ವೇಳೆ ಸಂಭಯ್ಯ ಮತ್ತು ಬೆಂಬಲಿಗರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ತಿಳಿದು ಬಂದಿದೆ. ಯುವತಿ ಸಂಭಯ್ಯನ ಅಕ್ಕನ ಮಗಳು ಎಂದು ತಿಳಿದು ಬಂದಿದೆ. 

Trending videos

Back to Top