CONNECT WITH US  

ಅಂಬೇಡ್ಕರ್‌ ಆಶಯ ಈಡೇರಿಸಲು ಬದ್ಧ: ಸಿಎಂ

ಬೆಂಗಳೂರು: ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಅಂಬೇಡ್ಕರ್‌ ಅವರ ಆಶಯಗಳ ಈಡೇರಿಕೆಗೆ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 60ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮಂಗಳ ವಾರ
ವಿಧಾನಸೌಧದ ಆವರಣದಲ್ಲಿ ರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು, ಹಿಂದುಳಿದವರು ಹಾಗೂ ಅವಕಾಶ ವಂಚಿತರ ವಿಷಯದಲ್ಲಿ ನಮ್ಮ ಸರ್ಕಾರ ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸಲು ಬದಟಛಿವಾಗಿದೆ ಎಂದರು. ದಲಿತರು, ಹಿಂದುಳಿದವರು,
ಅವಕಾಶವಂಚಿತರನ್ನು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಅನ್ನುವುದು ಅಂಬೇಡ್ಕರ್‌ ಅವರ ಕನಸಾಗಿತ್ತು. ದಲಿತರು, ಹಿಂದುಳಿದವರು ಮತ್ತು ಅವಕಾಶ ವಂಚಿತರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಸಾಕಾಗುವುದಿಲ್ಲ. ಈ ವರ್ಗಗಳಿಗೆ, ಸಾಮಾಜಿಕ ಹಾಗೂ ಅರ್ಥಿಕ ಸ್ವಾತಂತ್ರ್ಯ ಸಿಗಬೇಕು ಎಂದು
ಅಂಬೇಡ್ಕರ್‌ ಹೇಳಿದ್ದರು, ಇದೇ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಶ್ವಕ್ಕೆ ಮಾದರಿ ಅನಿಸುವಂತ ಸಂವಿಧಾನವನ್ನು ದೇಶಕ್ಕೆ ಕೊಟ್ಟ ಅಂಬೇಡ್ಕರ್‌ ಅಪ್ರತಿಮ ಮೇಧಾವಿ. ರಾಜಕೀಯ
ಮುತ್ಸದ್ದಿ ಮತ್ತು ಅಗ್ರಗಣ್ಯ ರಾಷ್ಟ್ರ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಇತರರು ಉಪಸ್ಥಿತರಿದ್ದರು.

Trending videos

Back to Top