CONNECT WITH US  

ನಾಗೇಶ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ

ಬೆಂಗಳೂರು: 2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಡಾ. ನಾಗೇಶ್‌ಹೆಗಡೆ, ವಿಮರ್ಶಕ ಪ್ರೊ.ಓ.ಎಲ್‌. ನಾಗಭೂಷಣ ಸ್ವಾಮಿ ಸೇರಿದಂತೆ ಐವರು ಸಾಹಿತಿಗಳು ಆಯ್ಕೆಯಾಗಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಕನ್ನಡ ಸಾಹಿತ್ಯಕ್ಕೆ ನೀಡಿದ ಸೇವೆ ಪರಿಗಣಿಸಿ ಡಾ.ನಾಗೇಶ್‌ ಹೆಗಡೆ (ವಿಜ್ಞಾನ ಸಾಹಿತ್ಯ), ವಿಮರ್ಶಕರಾದ ಡಾ.ಎಚ್‌.ಎಸ್‌. ಶ್ರೀಮತಿ, ಪ್ರೊ.ಓ.ಎಲ್‌.ನಾಗಭೂಷಣ ಸ್ವಾಮಿ, ಕಥೆಗಾರ ಬಸವರಾಜು ಕುಕ್ಕರಹಳ್ಳಿ, ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ತಲಾ 50 ಸಾವಿರ ನಗದು, ಪ್ರಶಸ್ತಿ ಫ‌ಲಕ ನೀಡಲಾಗುವುದು ಎಂದು 
ತಿಳಿಸಿದರು.

ಪುಸ್ತಕ ಬಹುಮಾನ: 2015ರಲ್ಲಿ ಪ್ರಕಟವಾದ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ
ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸತ್ಯಮಂಗಲ ಮಹದೇವ- ಯಾರ ಹಂಗಿಲ್ಲ ಬೀಸುವ ಗಾಳಿಗೆ (ಕಾವ್ಯ), ಡಾ.ಲತಾ ಗುತ್ತಿ-ಕರಿನೀರು (ಕಾದಂಬರಿ), ಅನುಪಮಾ ಪ್ರಸಾದ್‌-ಜೋಗತಿ ಜೋಳಿಗೆ (ಸಣ್ಣಕತೆ), ಚಿದಾನಂದ ಸಾಲಿ- ಕರುಳ ತೆಪ್ಪದ ಮೇಲೆ (ನಾಟಕ), ಎಚ್‌. ಶಾಂತರಾಜ ಐತಾಳ್‌-ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು (ಲಲಿತ ಪ್ರಬಂಧ), 
ಡಾ.ಬಿ.ಎಸ್‌.ಪ್ರಣತಾರ್ತಿಹರನ್‌-ಆಸುಪಾಸು (ಪ್ರವಾಸಿ ಸಾಹಿತ್ಯ), ದೊಡ್ಡ ಹುಲ್ಲೂರು ರುಕ್ಕೋಜಿ- ಡಾ.ರಾಜ್‌ಕುಮಾರ್‌
ಚರಿತ್ರ-ಜೀವನ, ಡಾ.ರಾಜ್‌ಕುಮಾರ್‌ ಸಮಗ್ರ ಚರಿತ್ರ-ಚಲನಚಿತ್ರ (ಜೀವನಚರಿತ್ರೆ), ಡಾ.ಎಚ್‌.ಎಲ್‌.ಪುಷ್ಪ-ಸಿOಉà ಎಂದರೆ ಅಷ್ಟೇ
ಸಾಕೆ (ಸಾಹಿತ್ಯ ವಿಮರ್ಶೆ), ವಿಜಯಶ್ರೀ ಹಾಲಾಡಿ-ಪಪ್ಪು ನಾಯಿಯ ಪೀಪಿ (ಮಕ್ಕಳ ಸಾಹಿತ್ಯ), ಡಾ.ನಾ.ಸೋಮೇಶ್ವರ-ಕಲಿಯುಗದ 
ಸಂಜೀವಿನಿ ಹೊಕ್ಕಳುಬಳ್ಳಿ (ವಿಜ್ಞಾನ ಸಾಹಿತ್ಯ), ಜಿ.ರಾಜಶೇಖರ-ಬಹುವಚನ ಭಾರತ (ಮಾನವಿಕ), ಪ್ರೊ.ಎ.ವಿ.ನಾವಡ- ಸಾಹಿತ್ಯ
ಶೋಧ (ಸಂಶೋಧನೆ), ಶೈಲಜ- ಕಾನ್ರಾಡ್‌ ಕಥೆಗಳು (ಅನುವಾದ), ಪತ್ರಕರ್ತ ಬಿ.ಎಸ್‌ .ಜಯಪ್ರಕಾಶ್‌ ನಾರಾಯಣ- ಕದಡಿದ ಕಣಿವೆ (ಅನುವಾದ), ಗೋಪಾಲ ವಾಜಪೇಯಿ-ರಂಗದ ಒಳ-ಹೊರಗೆ (ಸಂಕಿರ್ಣ) ಹಾಗೂ ದೀಪಾ ಗಿರೀಶ್‌- ಅಸ್ಮಿತಾ (ಕವನ) ಬಹುಮಾನಿತ ಕೃತಿಗಳಾಗಿದ್ದು, ತಲಾ 25 ಸಾವಿರ ನಗದು, ಪ್ರಶಸ್ತಿ ಫ‌ಲಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ದತ್ತಿನಿಧಿ ಬಹುಮಾನ: 2015ನೇ ಸಾಲಿನ ಅಕಾಡೆಮಿಯ 7 ದತ್ತಿನಿಧಿ ಬಹುಮಾನಗಳಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಿದ್ದು
ಎಂ.ಸತ್ಯಣ್ಣವರ ಅವರ ಕನಸ ಬೆನ್ಹತ್ತಿ ನಡಿಗೆ ಕೃತಿಗೆ ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ. ಜಾಣಗೆರೆ ವೆಂಕಟರಾಮಯ್ಯ ಅವರ ಮಹಾಯಾನ ಕೃತಿಗೆ ಚದುರಂಗ ದತ್ತಿನಿಧಿ  ಬಹುಮಾನ. ಡಾ.ಗಜಾನನ ಶರ್ಮಾ ಅವರ ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ ಕೃತಿಗೆ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ. ಡಾ.ಕವಿತಾ ರೈ ಅವರ ತಿಳಿಯಲು ಎರಡೆಂಬುದಿಲ್ಲ ಕೃತಿಗೆ ಪಿ.ಶ್ರೀನಿವಾಸರಾವ್‌ ದತ್ತಿ ಬಹುಮಾನ. ಡಾ.ಜಯಲಲಿತಾ ಅವರ ವಾರ್ಸಾದಲ್ಲೊಬ್ಬ ಭಗವಂತ ಅನುವಾದ ಕೃತಿಗೆ ಎಲ್‌.ಗುಂಡಪ್ಪ
ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ. ಚಂಪ ಜೈಪ್ರಕಾಶ್‌ ಅವರ 21ನೇ ಕ್ರೋಮೋಜೋಮ್‌ ಮತ್ತು ಇತರೆ ಕಥನಗಳು ಕೃತಿಗೆ ಮಧುರಚೆನ್ನ ದತ್ತಿನಿಧಿ ಬಹುಮಾನ ಹಾಗೂ ಶ್ರೀನಾಥ್‌ ಪೆರೂರ್‌ ಅವರ "ಘಾಛರ್‌ ಘೋಛರ್‌' ಕೃತಿಗೆ ಅಮೆರಿಕನ್ನಡ ದತ್ತಿನಿಧಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್‌ ಸಿ.ಎಚ್‌.ಭಾಗ್ಯ, ಸದಸ್ಯರಾದ ಮಹೇಶ್‌ ಹರವೆ, ಮೇಟಿ ಮುದಿಯಪ್ಪ, ಡಾ.ವಡ್ಡಗೆರೆ
ನಾಗರಾಜಯ್ಯ, ಪಟೇಲ್‌ಪಾಂಡು, ವಿಜಯಕಾಂತ್‌ ಪಾಟೀಲ್‌ ಮತ್ತಿತರರು ಇದ್ದರು.

Trending videos

Back to Top