CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೂಡಬಿದರೆ ಕಿರಣ್‌ಭಟ್‌ಗೆ ತಾಂತ್ರಿಕ ಆಸ್ಕರ್‌ ಪ್ರಶಸ್ತಿ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮೂಲದ ಕಿರಣ್‌ ಭಟ್‌ ಹಾಲಿವುಡ್‌ ಜಗತ್ತಿನ ಸಿನಿಮಾ ಕ್ಷೇತ್ರದಲ್ಲಿನ ವಿಶಿಷ್ಟ ತಾಂತ್ರಿಕ ಸಾಧನೆ ಗಾಗಿ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ.11ಕ್ಕೆ ಅಮೆರಿಕದಲ್ಲಿ ಪ್ರಶಸ್ತಿ ಪ್ರದಾನ ನಡೆಯ ಲಿದೆ. ಕಿರಣ್‌ ಭಟ್‌ ಅಭಿವೃದ್ಧಿಗೊಳಿಸಿದ "ಐಎಲ್‌ಎಂ ಫೇಸಿಯಲ್‌ ಪರ್‌ ಫಾರ್ಮೆನ್ಸ್‌-ಕ್ಯಾಪcರ್‌ ಸಾಲ್ವಿಂಗ್‌ ಸಿಸ್ಟಮ್‌'ಗಾಗಿ ಆಸ್ಕರ್‌ ಲಭಿಸಿದೆ. ಇವರ ತಂತ್ರಜ್ಞಾನವನ್ನು ಸ್ಟಾರ್‌ವಾರ್-7, ವಾರ್‌ಕ್ರಾಫ್ಟ್‌, ಎವೆಂಜರ್, ಸ್ಟಾರ್‌ವಾರ್ ರೋಗ್‌-1 ಮುಂತಾದ ಹಾಲಿವುಡ್‌ ಚಿತ್ರಗಳಲ್ಲಿ ಬಳಸಲಾಗಿದೆ.

41ರ ಹರೆಯದ ಕಿರಣ್‌ ಭಟ್‌ ಅಭಿವೃದ್ಧಿಗೊಳಿಸಿದ "ಐಎಲ್‌ಎಂ ಫೇಸಿಯಲ್‌ ಪರ್‌ಫಾರ್ಮೆನ್ಸ್‌-ಕ್ಯಾಪರ್‌ ಸಾಲ್ವಿಂಗ್‌ ಸಿಸ್ಟಮ್‌'ಗಾಗಿ ಆಸ್ಕರ್‌ ಲಭಿಸಿದೆ. ಕಾಲ್ಪನಿಕ ಅಥವಾ ಜತೆಯಲ್ಲಿಲ್ಲದ ಪಾತ್ರಗಳನ್ನು ನೈಜರೂಪದಲ್ಲಿ ತೋರಿಸುವ
ಇವರ ತಂತ್ರಜ್ಞಾನ ಸ್ಟಾರ್‌ವಾರ್-7, ವಾರ್‌ ಕ್ರಾಫ್ಟ್‌, ಎವೆಂಜರ್, ಸ್ಟಾರ್‌ವಾರ್ ರೋಗ್‌ -1 ಮುಂತಾದ ಹಾಲಿವುಡ್‌ ಚಿತ್ರಗಳಲ್ಲಿ ಬಳಕೆಯಾಗಿದೆ. ಈ ಸಾಧನೆಯನ್ನು ಗುರುತಿಸಿರುವ ಅಕಾಡೆಮಿ ಆಫ್‌ ಮೋಶನ್‌ ಪಿಕ್ಚರ್ ಆರ್ಟ್ಸ್ ಆ್ಯಂಡ್‌ ಸೈನ್ಸ್‌, ಫೆ. 11ರಂದು ಬೆವೆರ್ಲಿ ವಿಲ್‌ಶೈರ್‌ನಲ್ಲಿ ಆಸ್ಕರ್‌ ಪ್ರಶಸ್ತಿ ಪ್ರಧಾನ ಮಾಡುತ್ತಿದೆ. ಈವರೆಗೆ 7
ಮಂದಿ ಭಾರತೀಯರು ಮಾತ್ರ ಆಸ್ಕರ್‌ಗೆ ಪಾತ್ರರಾಗಿದ್ದಾರೆ.

ಕಡಂದಲೆಯವರು: 
ಪ್ರಸ್ತುತ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಕೈಗಾರಿಕಾ ಉದ್ಯಮಿಯಾಗಿರುವ ಕಿರಣ್‌ ಭಟ್‌, ಡಿಜಿಟಲ್‌ ಕ್ಯಾಮೆರಾ ಮೂಲಕವೇ ಮುಖ ಭಾವಗಳನ್ನು ಪರಿಷ್ಕರಿಸುವ ತಂತ್ರಜ್ಞಾನವನ್ನು ಹಾಲಿವುಡ್‌ ಜಗತ್ತಿಗೆ ನೀಡಿದ್ದಾರೆ. ಕಿರಣ್‌
ಭಟ್‌ ಅವರ ತಂದೆ ಮೂಡಬಿದಿರೆ ಸಮೀಪದ ಕಡಂದಲೆ ಶ್ರೀನಿವಾಸ ಭಟ್‌. ತಾಯಿ ಕಲ್ಯಾಣಪುರ ಮೂಲದ
ಜಯಶ್ರೀ. ಭಟ್‌ ಅವರ ಮೂಲ ಕುಟುಂಬ ಕಡಂದಲೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಕೈಂಕರ್ಯ ನಿರ್ವಹಿಸುತ್ತಿತ್ತು. ಭಟ್‌ ಅವರು 15 ವರ್ಷ ವಿಪ್ರೋದಲ್ಲಿದ್ದರು.

ಪಿಲಾನಿಯ ಬಿರ್ಲಾ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್‌ ಆ್ಯಂಡ್‌ ಎಂಜಿನಿಯರಿಂಗ್‌
ಪದವಿ ಪಡೆದು, ಅಮೆರಿಕದ ಕಾರ್ನೆಗಿ ಮೆಲನ್‌  ವಿ.ವಿ.ಯಲ್ಲಿ ಕಂಪ್ಯೂಟರ್‌ ಸೈನ್‌ Õನಲ್ಲಿ ಡಾಕ್ಟರೇಟ್‌ ಪಡೆದರು. ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ, ಬಳಿಕ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ತನ್ನದೇ ಆದ ತಾಂತ್ರಿಕ ಸಂಸ್ಥೆ ಸ್ಥಾಪಿಸಿದರು. ಆರು ವರ್ಷಗಳ ಹಿಂದೆ, ತನ್ನ ಸಹೋದ್ಯೋಗಿಗಳ ಜತೆ ಐಎಲ್‌ಎಂ ತಂತ್ರಜ್ಞಾನ ನಿರ್ಮಿಸಿದ್ದು, ಇದು ಹಾಲಿವುಡ್‌ ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿತು. ಭಟ್‌ ಅವರ ಪತ್ನಿ ಮುಂಬಯಿಯ ಪಾಯಲ್‌ ಅವರು ಕೂಡ ಡಾಕ್ಟರೇಟ್‌ ಪಡೆದವರು.

ಭಾರತದಲ್ಲೂ ಬಳಕೆ?: ಕಿರಣ್‌ ಭಟ್‌ ಅವರು ಆವಿಷ್ಕರಿಸಿದ ತಂತ್ರಜ್ಞಾನ ಸದ್ಯ ಹಾಲಿವುಡ್‌ನ‌ಲ್ಲಿ ಬಳಕೆಯಲ್ಲಿದೆ. ಆದರೆ ಈ ತಂತ್ರಜ್ಞಾನವನ್ನು ಭಾರತೀಯ ಚಲನಚಿತ್ರರಂಗಕ್ಕೂ ಪರಿಚಯಿಸುವ ಇರಾದೆ ಕಿರಣ್‌ ಅವರಲ್ಲಿದೆ. ಈ
ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಒಂದೆರಡು ವರ್ಷಗಳಲ್ಲಿ ಭಾರತೀಯ ಚಿತ್ರರಂಗಕ್ಕೂ ಬರಲಿದೆ ಎನ್ನುತ್ತಾರೆ ಭಟ್‌
ಕುಟುಂಬದವರು. 

*ಮನೋಹರ ಪ್ರಸಾದ್‌

Back to Top