CONNECT WITH US  

ಸಚಿವ ಸ್ಥಾನಕ್ಕೆ ಆತಂಕವಿಲ್ಲ: ರಮೇಶ್‌

ಬೆಳಗಾವಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಸಚಿವ ಸ್ಥಾನಕ್ಕೆ ಯಾವುದೇ ಆತಂಕ ಎದುರಾಗಿಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ದಾಳಿಯ ಹಿಂದೆ ಸ್ಥಳೀಯ ರಾಜಕಾರಣ ಇದೆ. ಕೆಲವರು ರಾಜಕೀಯ ಕಾರಣದಿಂದ ತಪ್ಪು ದಾರಿ ಹಿಡಿದಿದ್ದಾರೆ. ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ. ದ್ವೇಷದ ರಾಜಕೀಯ ಮಾಡಬಾರದು ಎಂದು ಮಾರ್ಮಿಕವಾಗಿ  ತಿಳಿಸಿದರು.

ನೇರ ಮಾತನಾಡುವುದು  ನನ್ನ ಸ್ವಭಾವ. ಯಾರಿಗೂ ಮೋಸ ಮಾಡಿಲ್ಲ. ವೈಯಕ್ತಿಕ ದ್ವೇಷದಿಂದ ನಾನು ಎಂದಿಗೂ ರಾಜಕೀಯ ಮಾಡುತ್ತಿಲ್ಲ. ನಗುವ ರಾಜಕಾರಣಿಗಳು ಮೋಸ ಮಾಡುತ್ತಾರೆ. ಸಚಿವನಾದ ತಕ್ಷಣವೇ ನಾನು ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಯಾವತ್ತೂ ಪ್ರಚಾರ ಬಯಸಿಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ನುಡಿದರು.

Trending videos

Back to Top