CONNECT WITH US  

"ಜೆಡಿಎಸ್‌ ಅಧಿಕಾರಕ್ಕೆ ಬಂದರಷ್ಟೇ ನಂಗೆ ಸಮಾಧಾನ': ದೇವೇಗೌಡ

ಪಾಂಡವಪುರ: ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್‌ ಜಯಗಳಿಸಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಯಲ್ಲಿ ಬದಲಾವಣೆ ತಂದಾಗ ಮಾತ್ರ ನನಗೆ ಸ್ವಲ್ಪ ಸಮಾಧಾನ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಹಾಗೂ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ವಿಜೇತರನ್ನು ಸನ್ಮಾನಿಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಮ್ಮ ಪಕ್ಷ ರಾಜಕೀಯ ಹೋರಾಟ ನಡೆಸಬೇಕಿದೆ. ಕುಮಾರಸ್ವಾಮಿ ಮನಸ್ಸಲ್ಲಿ ಹಲವು ಯೋಜನೆಗಳಿವೆ. ಅವು ಜಾರಿಯಾಗಬೇಕಾದರೆ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ 125ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇನ್ನೊಬ್ಬರ ಹಂಗಿನಿಂದ ಕುಮಾರಸ್ವಾಮಿ ಆಡಳಿತ ನಡೆಸಿದ್ರೆ ನನಗೆ ತುಂಬಾ ನೋವಾಗುವುದು ಎಂದು ಹೇಳಿದರು.

ಮಂಡ್ಯ ಜಿÇÉೆಯ ಜನರಿಂದ ರಾಜ್ಯದ ಜನಕ್ಕೆ ಹೊಸ ಸಂದೇಶ ಹೋಗಬೇಕಿದೆ. ರೈತರಾದ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಮಗೆ ಯಾವುದೇ ಜಾತಿ, ಧರ್ಮವಿಲ್ಲ, ರೈತರಿಗೆ ಸ್ಪಂದಿಸುವ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ಸಂದೇಶ ಕಳಿಸಬೇಕು ಎಂದರಲ್ಲದೆ, ಕುಮಾರಸ್ವಾಮಿ ಹುಬ್ಬಳ್ಳಿಯಲ್ಲೂ ಒಂದು ಮನೆ ಮಾಡಿದ್ದಾರೆ. ಅವರಿಗೆ ರಾಜಕೀಯ ಮತ್ತು ರಾಜ್ಯದ ಜನರ ಬಗ್ಗೆ ತುಂಬಾ ಆಸಕ್ತಿ ಇದೆ. ಅದಕ್ಕಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ ಎಂದರು.

ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿಯವರಿಗೂ ಸಮಾನ ಅಧಿಕಾರ ನೀಡಿದ್ದೇವೆ. ವಿಕೇಂದ್ರೀಕರಣ ಜಾರಿಗೊಳಿಸಿದ್ದೇವೆ. ನಾನೇ ಹೆಣ್ಣು ಮಕ್ಕಳಿಗೆ ಮೀಸಲಾತಿ ಜಾರಿಗೊಳಿಸಿದೆ. ಅದಿನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಅದು ಜಾರಿಯಾಗಬೇಕಾದರೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ನಾನೂ ಎಲ್ಲೆಡೆ ಹೋಗುವೆ:
ನಾನೂ ರಾಜ್ಯದ ಎಲ್ಲಾ ಭಾಗಗಳಿಗೆ ಹೋಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಗುರಿ. ಈಗಾಗಲೇ ಪಕ್ಷದ ಒಂದು ಕಟ್ಟಡವನ್ನು ನಾವು ಕಳೆದುಕೊಂಡಿದ್ದೇವೆ. ಈಗ ಹೊಸ ಕಟ್ಟಡ ಕಟ್ಟುತ್ತಿದ್ದೇವೆ. ಅದರ ಉದ್ಘಾಟನೆಗೆ ಎರಡರಿಂದ ಮೂರು ಲಕ್ಷ ಜನರನ್ನು ಸೇರಿಸುತ್ತೇವೆ. ನಮ್ಮ ಪಕ್ಷದ ಮುಖಂಡರೆಲ್ಲರೂ ಸಂಘಟನೆಗೆ ಒತ್ತು ನೀಡಿ ಕೆಲಸ ಮಾಡುವಂತೆ ತಿಳಿಸಿದರು.

ಮುಂದಿನ ತಿಂಗಳು ಪಕ್ಷ ಸಂಘಟನೆ ಸಂಬಂಧ ಚರ್ಚಿಸಲು ಸಭೆ ಕರೆದಿದ್ದೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡೋಕೆ ಪಕ್ಷ ಉಳಿಸಿ ಎಂದು ಹೇಳುತ್ತಿಲ್ಲ. ಪಕ್ಷ ಉಳಿದರೆ ಮಾತ್ರವಷ್ಟೇ ಕುಮಾರಸ್ವಾಮಿ ಉಳಿಯೋದು. ಪಕ್ಷದ ಉಳಿವಿನಿಂದ ರಾಜ್ಯದ ಶ್ರೇಯೋಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.
ಮಿನಿ ತೀರ್ಪು:

ಪಂಚರಾಜ್ಯಗಳ ಚುನಾವಣೆ ದೇಶದ ಮಿನಿ ತೀರ್ಪಾಗಲಿದೆ. ಈ ಚುನಾವಣೆ ಫ‌ಲಿತಾಂಶ ಆಧರಿಸಿ ಮೀಸಲಾತಿ ಮಾರ್ಪಾಡಾಗಲಿದೆ. ಯಾವುದೋ ಒಂದೆರಡು ಜಾತಿಯ ಹಿಡಿತದಲ್ಲಿ ಮೀಸಲಾತಿ ಇರಬಾರದೆಂದು ಎಲ್ಲರಿಗೂ ಸಮಾನ ಅವಕಾಶ (ಮೀಸಲಾತಿ) ಕೊಟ್ಟೆ. ಅದನ್ನು ಯಾರಿಂದಲೂ ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಡಿಜಿಟಲ್‌ ಇಂಡಿಯಾ ಮಾಡ್ತೀನಿ ಅಂತಾರೆ. ಆ ವ್ಯವಸ್ಥೆಗೆ ನಮಗೇ ಹೊಂದಿಕೊಳ್ಳಲು ಐದತ್ತು ವರ್ಷವಾದರೂ ಬೇಕು. ಇದರಿಂದ ರೈತರಿಗೆ ತೊಂದರೆಯಾಗಲಿದೆ. ನಮಗೆ ಡಿಜಿಟಲ್‌ ಇಂಡಿಯಾ ಬೇಡ, ರೈತರ ಇಂಡಿಯಾ ಬೇಕು ಎಂದು ಹೇಳಿದರು.

ಮಹದಾಯಿ, ಕಾವೇರಿ ಸೇರಿದಂತೆ ದೊಡ್ಡ ಜವಾಬ್ದಾರಿ ಕುಮಾರಸ್ವಾಮಿ ಅವರಿಗಿದೆ. ಅಭಿವೃದ್ಧಿಯಲ್ಲಿ ನಾವು ತುಂಬಾ ಹಿಂದೆ ಉಳಿದಿದ್ದೇವೆ. ಕೆಲವರು ಜಾತಿ ಹೆಸರಲ್ಲಿ ಸಂಘರ್ಷ ಉಂಟು ಮಾಡುತ್ತಿ¨ªಾರೆ. ಕುಮಾರಸ್ವಾಮಿ ಆಡಳಿತದಲ್ಲಿ ಇದೆÇÉಾ ಇರೋದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ.  ಕುಮಾರಸ್ವಾಮಿ ನಾಯಕತ್ವದಲ್ಲಿ ನಾವೆÇÉಾ ಒಟ್ಟಾಗಿ ದುಡಿಯಬೇಕು ಎಂದು ನುಡಿದರು.

ಹಾಸ್ಯ ಮಾಡ್ತಿರೋರಿಗೆ ಬುದ್ಧಿ ಕಲಿಸಿ:
ಅಧಿಕಾರಕ್ಕೆ ಬಂದ ಕೂಡಲೇ ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆ ಎಂದು ನಾವು ಹೇಳುತ್ತಿದ್ದೇವೆ. ಅದಕ್ಕೆ ಸಿದ್ದರಾಮಯ್ಯ, ಶೆಟ್ಟರ್‌ ನೀವು ಅಧಿಕಾರಕ್ಕೆ ಬರಲ್ಲ ಅಂತ ಹಾಸ್ಯ ಮಾಡುತ್ತಿದ್ದಾರೆ. ಅವರಿಗೆ ಜನರು ಬುದ್ಧಿ ಕಲಿಸಬೇಕು. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ರೈತರ ಸಾಲವನ್ನು ಮನ್ನಾ ಮಾಡಿಯೇ ತೀರುತ್ತೇವೆ. ಅದನ್ನು ಸಾಬೀತುಪಡಿಸಲು ಜನರು ನಮ್ಮನ್ನು ಬೆಂಬಲಿಸಬೇಕು ಎಂದರು.

ಸುಭೀಕ್ಷವಾದ ಸರ್ಕಾರ ಬರಬೇಕಾದ್ರೆ, ಯೋಗ್ಯವಾದ ನಾಯಕನಿಗೆ ಆಡಳಿತ ಕೊಡಬೇಕು. ಅದರಿಂದ ಕುಮಾರಸ್ವಾಮಿಗೆ ಒಂದು ಅವಕಾಶ ಕೊಟ್ಟು ನೋಡೋಣ. ಈ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತೆ. ಪ್ರತಿ ರೈತನೂ ಇದು ನಮ್ಮ ಸರ್ಕಾರ ಎಂದು ಹೇಳಬೇಕು. ಅದು ನನ್ನ ಜೀವನದ ಕನಸು ಎಂದು ಹೇಳಿದರು.

Trending videos

Back to Top