ಅನ್ಯ ಪಕ್ಷಗಳ ಪ್ರಭಾವಿಗಳಿಗೂ ಜೆಡಿಎಸ್‌ ಗಾಳ

Team Udayavani, Feb 16, 2017, 3:45 AM IST

JDS.jpg

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಹಠಕ್ಕೆ ಬಿದ್ದಿರುವ ಜೆಡಿಎಸ್‌, ಸ್ವಂತ ಶಕ್ತಿ ಮೇಲೆ ಗೆಲುವು ಸಾಧಿಸುವ ಪ್ರಭಾವಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದು, ಕಾಂಗ್ರೆಸ್‌ಗೆ ತ್ಯಜಿಸಿರುವ ಎಸ್‌.ಎಂ.ಕೃಷ್ಣ ಬೆಂಬಲಿಗರು ಸೇರಿದಂತೆ ಹಲವಾರು ಪ್ರಮುಖ ನಾಯಕರ ಜತೆ ಮಾತುಕತೆ ಆರಂಭಿಸಿದೆ.

ಎಸ್‌.ಎಂ.ಕೃಷ್ಣ ಅವರ ಪ್ರಬಲ ಅನುಯಾಯಿ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಮಾಜಿ ಕೇಂದ್ರ ಸಚಿವ ಜಾಲಪ್ಪ ಅವರ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಮಾಜಿ ಸಚಿವ ಚೆನ್ನಪಟ್ಟಣದ ಸಿ.ಪಿ.ಯೋಗೇಶ್ವರ್‌ ಅವರ ಜೆಡಿಎಸ್‌ ಸೇರ್ಪಡೆ ಸಂಬಂಧ ಮಾತುಕತೆ ನಡೆದಿದೆ. ಮುಳಬಾಗಿಲು ಹಾಲಿ ಶಾಸಕ ಕೊತ್ತೂರು ಮಂಜುನಾಥ್‌ ಜೆಡಿಎಸ್‌ ಸೇರ್ಪಡೆಗೆ ಒಲವು ಹೊಂದ್ದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಮುಖಂಡರು ಸಹ ಜೆಡಿಎಸ್‌ಗೆ ಸೇರಲು ಆಸಕ್ತಿಯನ್ನು ತೋರಿದ್ದು, ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಮಂಗಳವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ 75 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿದೆ.ಈ ಮಾಸಾಂತ್ಯಕ್ಕೆ ಇನ್ನೂ 25 ಕ್ಷೇತ್ರಗಳಿಗೆ ಅಭ್ಯಥಿಗಳನ್ನು ಅಂತಿಮಗೊಳಿಸಿ ಮೊದಲ ಹಂತದಲ್ಲಿ ಕನಿಷ್ಠ 100 ಕ್ಷೇತ್ರಗಳ ಪಟ್ಟಿ ಮೊದಲ ಹಂತದಲ್ಲಿ ಬೃಹತ್‌ ಸಮಾವೇಶ ನಡೆಸಿ ಘೋಷಿಸುವ ತೀರ್ಮಾನಕ್ಕೆ ಬಂದಿದೆ.

ಮೊದಲ ಹಂತದಲ್ಲಿ 120 ರಿಂದ 130 ಕ್ಷೇತ್ರಗಳ ಪಟ್ಟಿ ಬಿಡುಗಡೆಗೆ ತೀರ್ಮಾನಿಸಿ ಜನವರಿಯಲ್ಲೇ 100 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತಾದರೂ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಪ್ರಭಾವಿ ಮುಖಂಡರು ಬರುವ ಬಗ್ಗೆ ಮಾತುಕತೆ ನಡೆಸಿದ್ದು ಹಾಗೂ ಆಯ್ಕೆ ಮಾಡಲಾಗಿದ್ದ ಅಭ್ಯರ್ಥಿಗಳ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರ ಒಲವು ವ್ಯಕ್ತವಾಗದ ಕಾರಣ ಇದೀಗ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜನತಾಪರಿವಾರದ ಮೂಲದವರೇ ಆಗಿರುವ ಪಿ.ಜಿ.ಆರ್‌.ಸಿಂದ್ಯ ಅವರನ್ನು ಮನವೊಲಿಸಿ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ಖುದ್ದು ಎಚ್‌.ಡಿ.ದೇವೇಗೌಡರಿಂದಲೇ ಆಗುತ್ತಿದೆ ಎನ್ನಲಾಗಿದೆ. ಮತ್ತೂಂದು ಬೆಳವಣಿಗೆಯಲ್ಲಿ ಶಾಸಕ ಗೋಪಾಲಯ್ಯ ಪತ್ನಿ ಮಾಜಿ ಉಪ ಮೇಯರ್‌ ಹೇಮಲತಾ ಅವರ ಹೆಸರು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕೇಳಿಬರುತ್ತಿದೆ.

ರಾಜ್ಯದ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ “ಗಟ್ಟಿ’ ಅಭ್ಯರ್ಥಿಗಳ ಕೊರತೆ ಇದೆ. ಆದರೆ, ಕನಿಷ್ಠ 100 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರಿಗಂತೂ ಕೊರತೆಯಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳಿಂದ ಗೆಲ್ಲುವ ಸಾಮರ್ಥ್ಯ ಇರುವವರು ಜೆಡಿಎಸ್‌ಗೆ ಬರಬಹುದು. ಹೀಗಾಗಿ, ತಕ್ಷಣಕ್ಕೆ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಚುನಾವಣಾ “ಅಖಾಡ’ಕ್ಕೆ ಇಳಿಸಿ ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಲ್ಲಿ ಶಕ್ತಿವಂತ ಅಭ್ಯರ್ಥಿಗಳನ್ನು ತಲಾಷೆ ಮಾಡುವುದು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರ “ಮಾಸ್ಟರ್‌ ಪ್ಲಾನ್‌’ ಎಂದು ಪಕ್ಷದ ನಾಯಕರೊಬ್ಬರು ತಿಳಿಸುತ್ತಾರೆ.

ಈಗಾಗಲೇ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡ ಎಂಟು ಶಾಸಕರ ಪೈಕಿ ಮಹಾಲಕ್ಷ್ಮಿ ಲೇ ಔಟ್‌ನ ಗೋಪಾಲಯ್ಯ ಅವರ ಅಮಾನತು ರದ್ದು ಮಾಡಲಾಗಿದೆ. ಆದರೆ, ಇನ್ನೂ ಐವರು ಶಾಸಕರು ಬೇರೆ ಪಕ್ಷಗಳತ್ತ ಕಣ್ಣು ಹಾಕಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ, ಗೊಂದಲಕ್ಕೆ ಅವಕಾಶ ಇರಬಾರದು ಎಂಬ ಕಾರಣಕ್ಕೆ ಏಳು ಜನ ಹೊರತುಪಡಿಸಿ ಹಾಲಿ ಶಾಸಕರಿಗೆಲ್ಲಾ ಮೊದಲ ಪಟ್ಟಿಯಲ್ಲೇ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳುತ್ತಾರೆ.

-ಕೋರ್‌ ಕಮಿಟಿಯಲ್ಲಿ ಅಂತಿಮಗೊಂಡಿರುವ ಪಟ್ಟಿ
*ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬಾ
*ರಾಯಚೂರು-ಡಾ.ಶಿವರಾಜ್‌ ಪಾಟೀಲ್‌
*ಲಿಂಗಸಗೂರು-ಮಾನಪ್ಪ ವಜ್ಜಲ್‌
*ಹರಿಹರ- ಎಚ್‌.ಎಸ್‌.ಶಿವಶಂಕರ್‌
*ಶಿವಮೊಗ್ಗ ಗ್ರಾಮಾಂತರ- ಶಾರಧಾ ಪೂರ್ಯ ನಾಯಕ್‌
*ಭದ್ರಾವತಿ-ಅಪ್ಪಾಜಿ
*ಸೊರಬ-ಮಧು ಬಂಗಾರಪ್ಪ
*ಮೂಡಿಗೆರೆ- ಬಿ.ಬಿ.ನಿಂಗಯ್ಯ
*ಕಡೂರು-ವೈಎಸ್‌ವಿ ದತ್ತ
*ಚಿಕ್ಕನಾಯಕನಹಳ್ಳಿ-ಸುರೇಶ್‌ಬಾಬು
*ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
*ಕುಣಿಗಲ್‌-ಡಿ.ನಾಗರಾಜಯ್ಯ
*ಕೊರಟಗೆರೆ-ಸುಧಾಕರ್‌ ಲಾಲ್‌
*ಗುಬ್ಬಿ-ವಾಸು
*ಪಾವಗಡ-ತಿಮ್ಮರಾಯಪ್ಪ
*ಶಿಡ್ಲಘಟ್ಟ-ರಾಜಣ್ಣ
*ಚಿಂತಾಮಣಿ-ಜಿ.ಕೆ.ಕೃಷ್ಣಾರೆಡ್ಡಿ
*ಮಾಲೂರು-ಮಂಜುನಾಥಗೌಡ
*ಮಹಾಲಕ್ಷ್ಮಿ ಲೇ ಔಟ್‌- ಗೋಪಾಲಯ್ಯ
*ದೇವನಹಳ್ಳಿ-ಪಿಳ್ಳಮುನಿಶಾಮಪ್ಪ
*ನೆಲಮಂಗಲ-ಡಾ.ಶ್ರೀನಿವಾಸಮೂರ್ತಿ
*ರಾಮನಗರ-ಎಚ್‌.ಡಿ.ಕುಮಾರಸ್ವಾಮಿ
*ಮದ್ದೂರು-ಡಿ.ಸಿ.ತಮ್ಮಣ್ಣ
*ಕೃಷ್ಣರಾಜಪೇಟೆ-ನಾರಾಯಣಗೌಡ
*ಶ್ರವಣಬೆಳಗೊಳ-ಸಿ.ಎನ್‌.ಬಾಲಕೃಷ್ಣ
*ಅರಸೀಕೆರೆ-ಶಿವಲಿಂಗೇಗೌಡ
*ಹಾಸನ-ಪ್ರಕಾಶ್‌
*ಹೊಳೇನರಸೀಪುರ-ಎಚ್‌.ಡಿ.ರೇವಣ್ಣ
*ಸಕಲೇಶಪುರ-ಎಚ್‌.ಕೆ.ಕುಮಾರಸ್ವಾಮಿ
*ಕೃಷ್ಣರಾಜನಗರ-ಸಾ.ರಾ.ಮಹೇಶ್‌
*ಹೆಗ್ಗಡದೇವನಗೋಟೆ- ಚಿಕ್ಕಮಾದು
*ಚಾಮುಂಡೇಶ್ವರಿ-ಜಿ.ಟಿ.ದೇವೇಗೌಡ
*ನವಲಗುಂದ- ಕೋನರೆಡ್ಡಿ
*ಕಾಗವಾಡ-ಶ್ರೀಮಂತ ಪಾಟೀಲ್‌
*ದೇವರಹಿಪ್ಪರಗಿ-ಎ.ಎಸ್‌.ಪಾಟೀಲ್‌ ನಡಹಳ್ಳಿ
*ಸಿಂಧಗಿ-ಎಂ.ಸಿ.ಮನಗೋಳಿ
*ಬೀದರ್‌ ದಕ್ಷಿಣ-ಬಂಡೆಪ್ಪ ಕಾಶಂಪುರ್‌
*ಶಿವಮೊಗ್ಗ-ಶ್ರೀಕಾಂತ್‌
*ಶ್ರೀಂಗೇರಿ-ಎಚ್‌.ಜಿ. ವೆಂಕಟೇಶ್‌
*ತಿಪಟೂರು-ಲೋಕೇಶ್ವರ್‌
*ತುಮಕೂರು-ಗೋವಿಂದರಾಜ್‌
*ತುಮಕೂರು ಗ್ರಾಮಾಂತರ-ಗೌರಿಶಂಕರ
*ಸಿರಾ-ಸತ್ಯನಾರಾಯಣ
*ಮಳವಳ್ಳಿ-ಡಾ.ಅನ್ನಾದಾನಿ
*ಮಂಡ್ಯ-ಎಂ.ಶ್ರೀನಿವಾಸ್‌
*ಅರಕಲಗೂಡು-ಎ.ಟಿ.ರಾಮಸ್ವಾಮಿ
*ಪಿರಿಯಾಪಟ್ಟಣ-ಮಹದೇವ್‌
*ನರಸಿಂಹರಾಜ-ಸಂದೇಶಸ್ವಾಮಿ
*ಟಿ.ನರಸೀಪುರ-ಸುಂದರೇಶನ್‌
*ಕೊಪ್ಪಳ-ಪ್ರದೀಪ್‌ಗೌಡ
*ಹುಬ್ಬಳ್ಳಿ-ಧಾರವಾಡ ಪೂರ್ವ-ಹಲ್ಕೋಡ್‌ ಹನುಮಂತಪ್ಪ
*ಸಿರಸಿ-ಶಶಿಭೂಷಣ ಹೆಗಡೆ
*ಗುರುಮಿಟ್ಕಲ್‌-ನಾಗನಗೌಡ
*ಚಿಂಚೋಳಿ-ಸುಶೀಲಾಬಾಯಿ
*ಚಾಮರಾಜ-ರಂಗಪ್ಪ
*ಹನೂರು-ಪರಿಮಳ ನಾಗಪ್ಪ
*ಮುಳಬಾಗಿಲು – ಸಿದ್ಧನಹಳ್ಳಿ ಶೇಖರ್‌/ ಆದಿನಾರಾಯಣ/ಕೋಲಾರ ಕೇಶವ
*ಬಾಗೇಪಲ್ಲಿ-ಹರಿನಾಥರೆಡ್ಡಿ
*ಚಿಕ್ಕಬಳ್ಳಾಪುರ-ಬಚ್ಚೇಗೌಡ/ಕೆ.ವಿ.ನಾಗಾರಾಜ್‌
*ಶ್ರೀನಿವಾಸಪುರ-ವೆಂಕಟಶಿವಾರೆಡ್ಡಿ
*ಕೆಜಿಎಫ್- ಭಕ್ತವತ್ಸಲಂ/ಕೆ.ವಿ.ರಾಜೇಂದ್ರನ್‌
*ಕೋಲಾರ-ಶ್ರೀನಿವಾಸಗೌಡ/ ರಾಮರಾಜು/ಮುಬಾರಕ್‌
*ಯಲಹಂಕ-ಜಿ.ಹನುಮಂತೇಗೌಡ
*ಯಶವಂತಪುರ-ಟಿ.ಎನ್‌.ಜವರಾಯಿಗೌಡ
*ಹೆಬ್ಟಾಳ-ಹನುಮಂತೇಗೌಡ
*ಬಸವನಗುಡಿ-ಬಾಗೇಗೌಡ
*ದೊಡ್ಡಬಳ್ಳಾಪುರ-ಮುನೇಗೌಡ/ ಜೆ.ನರಸಿಂಹಸ್ವಾಮಿ
*ಕನಕಪುರ-ವಿಶ್ವನಾಥ್‌/ಪಿ.ಜಿ.ಆರ್‌.ಸಿಂಧ್ಯ
*ಚನ್ನಪಟ್ಟಣ-ಅಶ್ವಥ್‌/ಲಿಂಗೇಶ್‌ಕುಮಾರ್‌/ಜಯಮುತ್ತು
*ರಾಜಾಜಿನಗರ-ಆನಂದ್‌
*ಪದ್ಮನಾಭನಗರ-ಗೋಪಾಲ್‌
*ಬೆಂಗಳೂರು ದಕ್ಷಿಣ-ಗೊಟ್ಟಿಗೆರೆ ಮಂಜು
*ಗಾಂಧಿನಗರ-ಡಿ.ಜಿ.ಚಕ್ರವರ್ತಿ ಅಲಿಯಾಸ್‌ ಸಕ್ರೆ/ಮಲ್ಲೇಶ್‌
*ರಾಜರಾಜೇಶ್ವರಿನಗರ-ಪ್ರಕಾಶ್‌/ ಹೇಮಲತಾ
*ದಾಸರಹಳ್ಳಿ-ಬೆಮೆಲ್‌ ಕಾಂತರಾಜ್‌/ಅಂದಾನಪ್ಪ/ರಂಗನಾಥ್‌

– ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.