CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉಪಚುನಾವಣೆಗೆ ಸಜ್ಜಾದ ನಂಜನಗೂಡಿಗೆ ರಾಜ್ಯ ಸರ್ಕಾರದ ವರ ಪ್ರಸಾದ!

ಬೆಂಗಳೂರು: ಉಪ ಚುನಾವಣೆಯ ಹೊಸ್ತಿಲಲ್ಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಹಲವು ನಿಯಮಗಳನ್ನು ಉಲ್ಲಂ ಸಿ 170 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ನಂಜನಗೂಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಉಪಚುನಾವಣೆ ದಿನಾಂಕ ಘೋಷಣೆಯಾದರೆ, ಯೋಜನೆಗಳಿಗೆ ಮಂಜೂರಾತಿ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಪ್ರಸಾದ್‌ ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನಾ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂರಾ ಎಪ್ಪತ್ತು ಕೋಟಿ ರೂಪಾಯಿ
ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆಗೆ ಅಂಕಿತ ಹಾಕಿದ್ದಾರೆ. ಕಾಮಗಾರಿಗಳಿಗೆ ಅನುಮೋದನೆ ನೀಡಿದ ದಾಖಲೆಗಳು ಉದಯವಾಣಿಗೆ ಲಭ್ಯವಾಗಿದೆ.

ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಇಲಾಖೆಯ (ಡಾ. ಎಚ್‌.ಸಿ. ಮಹದೇವಪ್ಪ ಈ ಇಲಾಖೆ ಸಚಿವ) ನೇತೃತ್ವಲ್ಲಿಯೇ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿಯನ್ನೂ ನೀಡಲಾಗಿದೆ. ಸಾಮಾನ್ಯವಾಗಿ ಐದು ಕೋಟಿ ರೂಪಾಯಿಗಳಿ ಗಿಂತಲೂ ಹೆಚ್ಚಿನ ವೆಚ್ಚದ ಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ಕಡ್ಡಾಯ ಆದರೆ, ನಂಜನ ಗೂಡಲ್ಲಿ ತ್ವರಿತವಾಗಿ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ದೃಷ್ಠಿಯಿಂದ ಸಚಿವ ಸಂಪುಟ ದಲ್ಲಿಯೂ ಚರ್ಚಿಸದೇ, ಪಾರದರ್ಶಕ ಕಾಯ್ದೆಯಿಂದ ವಿನಾಯಿತಿಯನ್ನೂ ನೀಡಿ, ತುಂಡು ಗುತ್ತಿಗೆ ಆಧಾರದ ಮೇಲೆ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ, ಸಚಿವ ಸ್ಥಾನದಿಂದ ಪದಚ್ಯುತಗೊಳಿಸಿದ್ದಕ್ಕೆ ಅಕ್ರೋಶಗೊಂಡು ಕಾಂಗ್ರೆಸ್‌ಗೆ ವಿದಾಯ ಹೇಳಿ, ಪ್ರತಿಪಕ್ಷ ಬಿಜೆಪಿ ಸೇರಿದ್ದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಚುನಾವಣೆಯಲ್ಲಿ ಮಣಿಸಲು ನಂಜನಗೂಡು ಕ್ಷೇತ್ರದ ಜನತೆಗೆ ಅಭಿವೃದ್ಧಿ ಕಾಮಗಾರಿಗಳ ಸೌಭಾಗ್ಯ ದಯಪಾಲಿಸಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅರ್ಧ ಕಿಲೋಮೀಟರ್‌, ಒಂದು ಕಿಲೋ ಮೀಟರ್‌ ಗ್ರಾಮೀಣ ರಸ್ತೆಗಳನ್ನೂ ಮಹದೇವಪ್ಪ ಅವರ ನೇತೃತ್ವದ
ಲೋಕೋಪಯೋಗಿ ಇಲಾಖೆ ಮೇಲುಸ್ತುವಾರಿಗೆ ನೀಡಲಾಗಿದೆ. ನಂಜನಗೂಡು ವಿಧಾನಸಭಾ ವ್ಯಾಪ್ತಿಯಲ್ಲಿ
ಬರುವ 9 ಗ್ರಾಮೀಣ ರಸ್ತೆಗಳು, 2 ನಗರಸಭಾ ರಸ್ತೆಗಳು, 4 ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 2ರಾಜ್ಯ ಹೆದ್ದಾರಿ
ರಸ್ತೆಗಳು ಸೇರಿ ಒಟ್ಟು 17 ರಸ್ತೆಗಳನ್ನು 55 ಕೋಟಿ ವೆಚ್ಚದಲ್ಲಿ ಅಭಿವೃದ್ಧ ಪಡಿಸಲು ಸೂಚಿಸಲಾಗಿದ್ದು, ಕಾಮಗಾರಿಗಳನ್ನು ಬಿಡಿ ಬಿಡಿಯಾಗಿ ನೀಡಲಾಗಿದೆ. ಕಾಮಗಾರಿಗೆ ಕೋರಿರುವ ಅಂದಾಜು ವೆಚ್ಚಕ್ಕಿಂತ ಪ್ರತಿ ಗ್ರಾಮದ ರಸ್ತೆಗೂ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಸೇರಿಸಿ ಬಿಡುಗಡೆ ಮಾಡಲಾಗಿದೆ.

*ಶಂಕರ ಪಾಗೋಜಿ

Back to Top