CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನನ್ನ ದೂರವಾಣಿ ಕದ್ದಾಲಿಸುತ್ತಿದ್ದಾರೆ: ಡಿಕೆಶಿ

ಬೆಂಗಳೂರು: "ನನ್ನ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇತ್ತೀಚೆಗೆ ತಮ್ಮ ದೂರವಾಣಿ ಕದ್ದಾಲಿಸುತ್ತಿರುವ ಬಗ್ಗೆ ಅನು ಮಾನವಿದೆ ಎಂದು ಹೇಳಿದರು.

ದೂರವಾಣಿಯಲ್ಲಿ ಬೇರೆಯ ವರ ಜತೆ ಸಂಭಾಷಣೆ ಮಾಡು ವಾಗ ಇದ್ದಕ್ಕಿದ್ದಂತೆ ಕರೆ ಸ್ಥಗಿತ ಗೊಳ್ಳುತ್ತದೆ. ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದರೆ ಈ ರೀತಿಯಾಗತ್ತದೆ ಎಂದು ತಾಂತ್ರಿಕವಾಗಿ ತಿಳಿದವರು ಹೇಳುತ್ತಾರೆ. ಹೀಗಾಗಿ ನನ್ನ ದೂರ ವಾಣಿಯೂ ಕದ್ದಾಲಿಕೆಯಾಗುತ್ತಿದೆಯೆಂಬ ಸಂಶಯ ಮೂಡಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಡಿ.ಕೆ.ಶಿವಕುಮಾರ್‌ ಆತಂಕಗೊಂಡಿದ್ದಾರೆಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವುದು ಸಾಮಾನ್ಯ. ಆದರಲ್ಲಿ ರಾಜಕೀಯ ಬೆರೆಸಬಾರದು. ಆದಾಯ ತೆರಿಗೆ ಇಲಾಖೆಯವರಿಗೆ ಯಾರ ಮೇಲಾದರೂ ದಾಳಿ ಮಾಡುವ ಅಧಿಕಾರವಿದೆ. ಹಿಂದೊಮ್ಮೆ ನನ್ನ ಮನೆ ಮೇಲೂ ದಾಳಿ ಮಾಡಿದ್ದರು.

ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿದ ಬಳಿಕ ನನಗೆ ನೋಟಿಸ್‌ ನೀಡಿದ್ದು, ಅದಕ್ಕೆ ಉತ್ತರಿಸಿದ್ದೇನೆ ಎಂದು ಹೇಳಿದರು.

ದಾಳಿ ಮಾಡುವುದು ಮತ್ತು ನೋಟಿಸ್‌ ನೀಡುವುದು ಅವರ ಕರ್ತವ್ಯ ಎಂಬುದು ನನಗೂ ಗೊತ್ತಿದೆ. ಇದರಲ್ಲಿ ಗಾಬರಿಯಾಗುವುದು ಏನೂ ಇಲ್ಲ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಪ್ರಶ್ನೆಗೆ, ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಕೊಂಡು ಕೂತಿಲ್ಲ. ಅಧ್ಯಕ್ಷರನ್ನು ಮುಂದುವರಿಸಬೇಕೇ? ಬದಲಾವಣೆ ಮಾಡಬೇಕೇ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದಷ್ಟೇ ಹೇಳಿದರು.

ಕೆಎಂಎಫ್ ಗೆ ಶೀಘ್ರ ಹೊಸ ಅಧ್ಯಕ್ಷ 
ಬೆಂಗಳೂರು:
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್)ಅಧ್ಯಕ್ಷ ನಾಗರಾಜ್‌ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದ್ಯದಲ್ಲೇ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಆಗಿದ್ದ ಒಪ್ಪಂದದಂತೆ ನಾಗರಾಜ್‌ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಎಂಎಫ್ನ ಬಜೆಟ್‌ ಅಂತಿಮಗೊಳ್ಳುವವರೆಗೆ ಮುಂದುವರಿಯಲು ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ತಿಳಿಸಿದರು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆಗಿರುವ ಒಪ್ಪಂದಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಕೆಎಂಎಫ್ ಬಜೆಟ್‌ ಪೂರ್ಣಗೊಳ್ಳುವ ವೇಳೆಗೆ ರಾಜ್ಯದ ಬಜೆಟ್‌ ಅಧಿವೇಶನವೂ ಮುಗಿಯಲಿದ್ದು, ಬಳಿಕ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಿದರು.

ಸಂಘದ ಸಮಸ್ಯೆ ನಿವಾರಿಸುತ್ತೇವೆ: ಒಕ್ಕಲಿಗರ ಸಂಘದ ಅಧ್ಯಕ್ಷರ ನೇಮಕ ವಿವಾದ ಮತ್ತು ಪದಾಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ ನಡೆಯುತ್ತಿದೆ. ತಾವು, ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಸೇರಿ ಹಲವು ಮುಖಂಡರು ಒಟ್ಟಿಗೆ ಕುಳಿತು ಎಲ್ಲವನ್ನೂ ಬಗೆಹರಿಸುತ್ತೇವೆ ಎಂದರು.

Back to Top