ಕರಾವಳಿ ಅಪರಾಧ ಸುದ್ದಿಗಳು


Team Udayavani, Mar 18, 2019, 5:17 AM IST

crime-news-symbolic-750.jpg

ಮಂಗಳೂರು: ಕಲ್ಲಿನಿಂದ ಜಜ್ಜಿ ಅಪರಿಚಿತ ವ್ಯಕ್ತಿಯ  ಕೊಲೆ
ಮಂಗಳೂರು: ನಗರದ ಅಜೀಜುದ್ದೀನ್‌ ರಸ್ತೆ ಬದಿಯ ಟೆಂಪೋ ಪಾರ್ಕಿಂಗ್‌ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ  ರವಿವಾರ ಬೆಳಗ್ಗೆ  ಪತ್ತೆಯಾಗಿದೆ.
ಕೊಲೆಯಾದ ವ್ಯಕ್ತಿ ಸುಮಾರು 35ರಿಂದ 40 ವರ್ಷ ಪ್ರಾಯದವ ರಾಗಿದ್ದು, ಅವರ ಕೈಯ ತೋಳಿನಲ್ಲಿ “ಜಗ್ಗರಾವ್‌’ ಎಂದು ಹಚ್ಚೆ ಹಾಕಲಾ ಗಿದೆ. ಬೇರೆ   ಮಾಹಿತಿ ಲಭಿಸಿಲ್ಲ.  ರವಿ ವಾರ ಬೆಳಗ್ಗೆ 9 ಗಂಟೆಗೆ  ಮೃತ ದೇಹ ಕಂಡು ಬಂದಿದೆ.  ಕೊಲೆಗೆ  ಬಳಸಿದ್ದೆನ್ನಲಾದ ದೊಡ್ಡ ಕಲ್ಲು  ಭುಜದ ಭಾಗ ದಲ್ಲಿತ್ತು.  ಪಾಂಡೇಶ್ವರ  ಠಾಣೆಯಲ್ಲಿ  ಕೊಲೆ ಪ್ರಕರಣ ದಾಖಲಾಗಿದೆ. 
ಕಾರ್ಮಿಕರೇ ಅಧಿಕ
ಈ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಗೂಡ್ಸ್‌ ಶೆಡ್‌ ಪ್ರದೇಶದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮೂಲಕ ಮೃತರ ಗುರುತು ಪತ್ತೆಗೆ ಪೊಲೀಸರು  ಶ್ರಮಿಸುತ್ತಿದ್ದಾರೆ. 
ಮೃತರ ಚಹರೆ
ಮೃತ ವ್ಯಕ್ತಿ 5.7 ಎತ್ತರ, ಕಪ್ಪು ಬಣ್ಣದ ಸುಮಾರು 2 ಇಂಚು ಉದ್ದದ ತಲೆ ಕೂದಲು, ತೆಳು ಗಡ್ಡ, ಕಪ್ಪು ದಪ್ಪ ಮೀಸೆ, ಸದೃಢ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಲೇಟ್‌ ಬಣ್ಣ ಅರ್ಧ ತೋಳಿನ ಹಳೆಯ ಟೀಶರ್ಟ್‌ ಮತ್ತು ಲುಂಗಿ ಧರಿಸಿದ್ದಾರೆ.  ತಮಿಳುನಾಡು ಮೂಲದವನಿರುವ ಸಾಧ್ಯ ತೆ ಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಟಕಲ್ಲು: ವಿವಾಹಿತ ಮಹಿಳೆ ಆತ್ಮಹತ್ಯೆ 
ಪತಿ ಮನೆಯವರ ವಿರುದ್ಧ ದೂರು ದಾಖ ಲು
ಶಿರ್ವ:
ಬಂಟಕಲ್ಲು ಅರಸೀಕಟ್ಟೆಯ ಗಂಡನ ಮನೆ ಯಲ್ಲಿ ಸಂಗೀತಾ (26) ಅವರು ಶನಿ ವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಟಕಲ್ಲು ಅರಸೀಕಟ್ಟೆ ನಿವಾಸಿ ಸುಜಯ್‌ ಅವರ ಪತ್ನಿ ಯಾ ಗಿ ರುವ ಈಕೆಗೆ ಗಂಡ, ಅತ್ತಿಗೆ ಸುಜಾತಾ ಮತ್ತು ಅತ್ತೆ ಕುಸುಮಾ  ಅವರು  ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಹಾಗೂ 2 ತಿಂಗಳ ಗರ್ಭಿಣಿಯಾಗಿದ್ದಾಗ ಬಲವಂತದಿಂದ ಮಾತ್ರೆಗಳನ್ನು ತಿನ್ನಿಸಿ ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ. 
ಇದೇ ಕಾರಣಕ್ಕೆ ನೊಂದು ಆಕೆ  ಚೂಡಿದಾರದ ಶಾಲಿನಿಂದ ನೇಣು ಬಿಗಿ ದು ಕೊಂಡಿದ್ದು, ಕೂಡಲೇ ಅವ ರ ನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ಕರೆತಂದರೂ ಜೀವ ಉಳಿಸಲಾಗಲಿಲ್ಲ. ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಗರ್ಭಪಾತ ಮಾಡಿಸಿ ಆತ್ಮಹತ್ಯೆಗೆ ದುಷೆರಣೆ ನೀಡಿದ ಆರೋಪ ಹೊರಿಸಿ ಗಂಡ, ಅತ್ತಿಗೆ ಮತ್ತು ಅತ್ತೆ  ವಿರುದ್ಧ ಮೃತರ ಸಹೋದರ ಸುಭಾಸ್‌  ಅವರು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಣಿಪಾಲ: ರಿಕ್ಷಾ ಢಿಕ್ಕಿ; ರಸ್ತೆ ದಾಟಲು ನಿಂತಿದ್ದ ಮಹಿಳೆ ಸಾವು
ಉಡುಪಿ:ಮಣಿಪಾಲ ಎಂಜೆಸಿ ಬಸ್‌ ನಿಲ್ದಾಣದ ಬಳಿ ಭಾಗಶಃ ಪೂರ್ಣಗೊಂಡಿರುವ  ರಸ್ತೆಯಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಮೂಲತಃ ಕೋಲ್ಕತಾದವರಾಗಿದ್ದು ಮಣಿಪಾಲದಲ್ಲಿ ಕೆಲಸಕ್ಕಿದ್ದ ಕಲ್ಯಾಣಿ (47) ಮೃತಪಟ್ಟವರು. ಅವರು ಮಧ್ಯಾಹ್ನ ರಸ್ತೆ ದಾಟಲೆಂದು ರಸ್ತೆ ಬದಿ ನಿಂತಿದ್ದಾಗ ಟೈಗರ್‌ ಸರ್ಕಲ್‌ ಕಡೆಯಿಂದ ಸಿಂಡಿಕೇಟ್‌ ಸರ್ಕಲ್‌ ಕಡೆಗೆ ಅತಿವೇಗದಿಂದ ಬಂದ ಆಟೋರಿಕ್ಷಾ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ರಸ್ತೆಗೆ ಬಿದ್ದ ಕಲ್ಯಾಣಿ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.  ಇಲ್ಲಿ ಒಂದು ಭಾಗದ ರಸ್ತೆ ಭಾಗಶಃ ಪೂರ್ಣಗೊಂಡಿದ್ದು ಈ ರಸ್ತೆಯಲ್ಲಿ ವಾಹನಗಳು ಎರಡೂ ಬದಿಯಿಂದ ಸಂಚರಿಸುತ್ತಿವೆ.

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.