CONNECT WITH US  

ನಾನೂ ಹಿಂದೂ ಎಂದ ಸಿಎಂ

ಮೈಸೂರು: "ಬಿಜೆಪಿಯವರು ಮಾತ್ರ ಹಿಂದೂಗಳು, ನಾವ್ಯಾರೂ ಹಿಂದೂಗಳಲ್ವ, ನನ್ನ ಹೆಸರು ಕೂಡ ಸಿದ್ದರಾಮ ಅಂತಿದೆ, ನಾನೂ ಕೂಡ ಹಿಂದೂ' ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. "ಯಡಿಯೂರಪ್ಪ ಒಬ್ಬರೇ ಹಿಂದೂವಲ್ಲ, ಬಿಜೆಪಿ ನಾಯಕರು ಹಿಂದುತ್ವದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ
ಮಾಡುತ್ತಿದ್ದಾರೆ. ವಿಸ್ತಾರಕ್‌ ಯೋಜನೆ ಹೆಸರಲ್ಲಿ ಮನೆ ಮನೆಗೆ ಹೋಗಿ, ನೀವು ಹಿಂದೂಗಳು ಬಿಜೆಪಿಗೇ ಮತ ಹಾಕಿ ಎಂದು ಪುಸಲಾಯಿಸುವ ಮೂಲಕ ಹಿಂದುತ್ವವನ್ನು ವಿಸ್ತರಣೆ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರಿಗೆ ಇಂಥದ್ದೆಲ್ಲ ನೆನಪಾಗುತ್ತದೆ' ಎಂದು ಹರಿಹಾಯ್ದರು.

Trending videos

Back to Top